Header Ads
Header Ads
Breaking News

ಮಾದಕ ದ್ರವ್ಯ ವ್ಯಸನದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಬಿ.ಸಿ.ಸಿ.ಎಸ್ ಶತಮಾನೋತ್ಸವ ಮ್ಯರಥಾನ್-2018 ಮಾ.4ರಂದು ಉಡುಪಿಯಲ್ಲಿ ಆಯೋಜನೆ

ಯುವ ಜನತೆಯಲ್ಲಿ ಮಾಧಕ ದ್ರವ್ಯ ವ್ಯಸನದಿಂದಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಸ್ವಚ್ಚತಾ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲೆಯ ಸರ್ವರಿಗೆ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ 10ಕೆ -2018 ಮ್ಯಾರಥಾನ್ ಆಯೋಜಿಸಿದೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಡಗಬೆಟ್ಟು ಕ್ರೆಡಿಟ್ -ಖೊ ಅಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ್ ಶೆಟ್ಟಿ ಇಂದ್ರಾಳಿ ಒಟ್ಟು ನಾಲ್ಕು ವಿಭಾಗದಲ್ಲಿ ಮ್ಯರಥಾನ್ ನಡೆಯಲಿದೆ. 10ಕಿಮೀಟರ್ ಮುಕ್ತ ವಿಭಾಗ ಪುರುಷ ಹಾಗೊ ಮಹಿಳೆಯರಿಗೆ ನಡೆಯಲಿದ್ದು, 5ಕಿಲೋ ಮಿಟರ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ , 3ಕಿಲೋ ಮೀಟರ್ ಪ್ರಾಥಮಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಡೆಯಲಿದೆ. ಅದರ ಜೊತೆಗೆ ಉಡುಪಿ ಜಿಲ್ಲಾ ಸಹಕಾರ ಸಂಘದ ಸಿಬ್ಬಂದಿಗಳಿಗೆ 5ಕಿಲೋಮೀಟರ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದ್ದು ಮಾ.೪ರಂದು ಮಿಶನ್ ಕಪೌಂಡ್ ಬಳಿಕ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯ ಬಳಿ ಬೆಳಗ್ಗೆ 6 ಗಂಟೆಗೆ ಈ ಎಲ್ಲಾ ಮ್ಯರಥಾನ್ ಸ್ಪರ್ದೆ ಆರಂಭವಾಗಲಿದೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸ್ಪರ್ದೆಗೆ ಆಯ್ಕೆಯಾದ ಹಾಗೂ ಪ್ರಶಸ್ತಿಗಳಿಸಿದ ಅಥ್ಲಿಟ್ ಗಳಾದ ಅಭಿನ್ ದೇವಾಡಿಗ, ಜ್ಯೋತಿಕಾ, ಪೂರ್ಣಿಮಾ, ಕೀರ್ತನ, ತೃಷಾ, ಪ್ರಜ್ಞ ಅವರನ್ನು ಸನ್ಮಾನಿಸಲಾಗುವುದು ಎಂದು ಮ್ಯಾರಥಾನ್ ಬಗೆಗೆ ಮಾಹಿತಿ ನೀಡಿದರು.
ವರದಿ:ಪಲ್ಲವಿ ಸಂತೋಷ್

Related posts

Leave a Reply