Header Ads
Header Ads
Breaking News

ಮಾನಭಂಗಕ್ಕೆ ಯತ್ನಿಸಿದ ಯುವಕನ ಸೆರೆ

ಕಳೆದ ತಿಂಗಳು ಪಡುಬಿದ್ರಿಯ ಐಸ್ ಕ್ರೀಂ ಪಾರ್ಲರಿಗೆ ಬಂದ ಯುವಕ ಐಸ್ ಕ್ರೀಂ ಕೇಳುವ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ ಮಹಿಳೆ ಬೊಬ್ಬೆ ಹಾಕಿದಾಗ ಮಹಿಳೆಯನ್ನು ದೂಡಿ ಪರಾರಿಯಾದ ಯುವಕನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪಲಿಮಾರು ಮೇಲ್ಮಠಹೌಸ್ ನಿವಾಸಿ ಮುತ್ತು ಎಂಬವರ ಮಗ ಕಬೀರ್(23).ಈತ ಪಡುಬಿದ್ರಿಯ ಶಾಂತೇರಿ ಪಲ್ಲವಿ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಕಶ್ವಿ ಅಮುಲ್ ಐಸ್ ಕ್ರೀಂ ಪಾರ್ಲರ್‌ಗೆ ಜ.19ರ ರಾತ್ರಿ 9ರ ಸುಮಾರಿಗೆ ಬಂದು ಗಡ್‌ಬಡ್ ನೀಡುವಂತೆ ಹೇಳಿದ್ದಾನೆ, ಪಾರ್ಲರ್‌ನಲ್ಲಿ ಮಾಲಕಿ ಮಾತ್ರ ಇದ್ದು, ಐಸ್ ಕ್ರೀಂ ತಯಾರಿಗೆ ಮುಂದಾಗುತ್ತಿದಂತ್ತೆ ಹತ್ತಿರ ಬಂದ ಆತ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ, ಆಕೆ ಕಿರುಚಿಕೊಳ್ಳುತ್ತಿದಂತೆ ಆಕೆಯ ಕತ್ತು ಹಿಸುಕಿ ಹಿಡಿದು ನೆಲಕ್ಕೆ ದೂಡಿ ಪರಾರಿಯಾಗಿದ್ದ,

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪಾರ್ಲರ್‌ಗೆ ಹೋಗಿ ಬರುವ ದೃಶ್ಯ ಪಕ್ಕದ ಸೊಸೈಟಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿಸಿ ಟಿವಿಯ ಪೂಟೇಜ್ ಪಡೆದ ಪೊಲೀಸರು ಆರೋಪಿಯ ಪತ್ತೆಗೆ ಯತ್ನಿಸುತ್ತಿದ್ದರು. ಕಳೆದ ದಿನ ಆರೋಪಿ ಪಡುಬಿದ್ರಿ ಪೇಟೆಯ ಹೋಟೆಲೊಂದರ ಬಳಿ ಇಬ್ಬರೊಂದಿಗೆ ಮಾತನಾಡುತ್ತಿದ್ದ ದೃಶ್ಯ ಐಸ್ ಕ್ರೀಂ ಪಾರ್ಲರ್ ಮಾಲಕಿಯ ಕಣ್ಣಿಗೆ ಬಿದ್ದಿದೆ, ದೂರದಲ್ಲಿ ನಿಂತು ಆತನನ್ನು ಸರಿಯಾಗಿ ಗುರುತು ಹಿಡಿದಿದ್ದಾರೆ ಆ ಮಹಿಳೆ, ಆತ ಅಲ್ಲಿಂದ ತೆರಳುತ್ತಿದ್ದಂತ್ತೆ ಆತ ಮಾತನಾಡುತ್ತಿದ್ದ ವ್ಯಕ್ತಿಗಳಲ್ಲಿ ಆತನ ಹೆಸರು ಸಹಿತ ಆತನ ಮಾಹಿತಿಯನ್ನು ಕೇಳಿ ತಿಳಿದು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಚುರುಕಾದ ಪೊಲೀಸರು ಪಲಿಮಾರು ಪೇಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಆರೋಪಿ ಕಬೀರ್ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಮಾನ್ಯ ನ್ಯಾಯಾಲಯ ಆರೋಪಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿಯನ್ನು ಹಿರಿಯಡ್ಕ ಕಾರಾಗೃಹದಲ್ಲಿ ಇರಿಸಲಾಗಿದೆ.

Related posts

Leave a Reply