Header Ads
Header Ads
Header Ads
Breaking News

ವೃತ್ತಿ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪಯತ್ನಿಸಿ ಸುಳ್ಯದ ಸಿವಿಲ್ ನ್ಯಾಯಾಧೀಶ ಪುರುಶೋತ್ತಮ ಅಭಿಪ್ರಾಯ

ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ.ಅದರಲ್ಲಿ ಮುಖ್ಯವಾಗಿ ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚು.ಒತ್ತಡ ಇಲ್ಲದ ವೃತ್ತಿ ಇಲ್ಲ.ಜನರು ಆರೋಗ್ಯದ ದೃಷ್ಟಿಯಿಂದ ಕಡಿಮೆ ಒತ್ತಡದಿಂದ ಜೀವನ ನಡೆಸಲು ಪ್ರಯತ್ನ ಮಾಡಬೇಕೆಂದು ಸುಳ್ಯದ ಜೆ.ಎಂ.ಎಫ್.ಸಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಪರುಶೋತ್ತಮ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು,ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ,ವಕೀಲ ಸಂಘ ಸುಳ್ಯ,ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯ,ಹಾಗೂ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯ ಸುಳ್ಯ ಇದರ ವತಿಯಿಂದ ವಕೀಲರ ಸಭಾಭವನದಲ್ಲಿ ನಡೆದ ಮಾನಸಿಕ ಆರೋಗ್ಯ ದಿನಾಚರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಮಾಡಿದರು.

ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಸುಳ್ಯ ಜಯಪ್ರಕಾಶ್,ಕೆ.ವಿ.ಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ .ಬಿ,ಡಾ.ಸಾಯಿಗೀತಾ ಮುಖ್ಯ ಅಥಿಗಳಾಗಿ ಭಾಗವಹಿಸಿದರು.

ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಮನಶಾಸ್ತ್ರ ಪ್ರಾಧ್ಯಾಪಕರಾದ ಡಾ/ ಹರೀಶ ದೇಲಂತಬೆಟ್ಟು ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ವಕೀಲ ಸಂಘದ ಉಪಾಧ್ಯಕ್ಷ ಶ್ರೀಹರಿ ಕುಕ್ಕುಡೇಲು ಸ್ವಾಗತಿಸಿದರು.ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply