Header Ads
Header Ads
Header Ads
Breaking News

ಮಾನವೀಯತೆಗಿಂತ ಮಿಗಿಲಾದುದು ಬೇರೊಂದಿಲ್ಲ ನಾವೆಲ್ಲರು ಒಂದೇ ಸಮಾಜದವರು ಫಾದರ್ ಡೇವಿಸ್ ಅಭಿಪ್ರಾಯ

ಮಾನವೀಯತೆಗಿಂತ ಮಿಗಿಲಾದುದು ಬೇರೊಂದಿಲ್ಲ. ನಮ್ಮಲ್ಲಿ ನಾವೆಲ್ಲರು ಒಂದೇ ಎಂಬ ಭಾವನೆ ಮೂಡಬೇಕು, ಯಾಕೆಂದರೆ ನಾವೆಲ್ಲರು ಒಂದೇ ಸಮಾಜದವರು ಎಂದು ಫಾ. ಡೇವಿಸ್ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಯೇನೆಪೋಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ನಡೆದ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಮನುಷ್ಯ ಜನ್ಮ ನಮ್ಮದು. ಭವಿಷ್ಯದಲ್ಲಿ ನಮ್ಮನ್ನು ಯಾವ ರೋಗ ಬಾಧಿಸಬಹುದು ಎಂಬುದು ಭಗವಂತನಿಗೆ ಮಾತ್ರ ಗೊತ್ತು. ಅಧಿಕಾರ, ಆರ್ಥಿಕ ಸ್ಥಿತಿವಂತಿಕೆ ಹೊಂದಿದ್ದಾರೆಯೇ ಇಲ್ಲವೇ ಎಂಬುದು ಅಂಗಾಂಗಗಳಿಗೆ ಗೊತ್ತಿಲ್ಲ. ಹಾಗಾಗಿ ಇನ್ನೊಬ್ಬರಿಗೆ ಸಹಾಯ ಮಾಡಲು ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು. ಅಷ್ಟಕ್ಕೂ ನಮ್ಮಲ್ಲಿ ಎಲ್ಲರಲ್ಲೂ ಒಳ್ಳೆಯ ಮನಸ್ಸಿದ್ದರೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಅಗತ್ಯವಿಲ್ಲ ಎಂದು ನುಡಿದರು.

 

ಯೇನೆಪೋಯ ವಿವಿ ಕುಲಾಧಿಪತಿ ವೈ. ಅಬ್ದುಲ್ಲ ಕುಂಞ ಮಾತನಾಡಿ ಅಂಗಾಂಗ ದಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಸಂಭವಿಸಿದೆ. ಬಹಳಷ್ಟು ಸಂಖ್ಯೆಯ ರೋಗಿಗಳು ಅಂಗಾಂಗಗಳ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಮಾಧ್ಯಮ ಜಾಗೃತಿ ಮೂಡಿಸುವ ಕೆಲಸ ನಡೆಯ ಬೇಕು ಎಂದರು.

ಕುಲಸಚಿವ ಡಾ. ಶ್ರೀಕುಮಾರ್ ಮೆನನ್ , ಭ್ರಷ್ಟಾಚಾರ ನಿಗ್ರಹದಳದ ಎಸಿಪಿ ಶ್ರುತಿ ಎನ್.ಎಸ್, ಉದ್ಯಮಿ ಲಾಲ್ ಗೋಯೆಲ್, ಯೂರೋಲಾಜಿ ಪ್ರೊಸೆಸರ್ ಡಾ. ಮುಜೀಬ್ ರಹಮಾನ್ ಉಪಸ್ಥಿತರಿದ್ದರು.

ವರದಿ: ಆರೀಫ್ ಕಲ್ಕಟ್ಟ ಉಳ್ಳಾಲ

Related posts

Leave a Reply