Header Ads
Header Ads
Header Ads
Breaking News

ಮಾನವ ಸಕರಾತ್ಮಕ ಚಿಂತನೆಗಳತ್ತ ಮನಸ್ಸು ಕೇಂದ್ರಿಕರಿಸಲಿ ಪ್ರತಿ ಮನೆಗಳಲ್ಲಿ ಪ್ರೀತಿ, ಬಾಂಧವ್ಯ ಬೆಳೆಸುವ ಕಾರ್ಯವಾಗಲಿ ಮಾಣಿಲ ಶ್ರೀಧಾಮದ ಮೋಹನದಾಸ್ ಪರಮಹಂಸ ಸ್ವಾಮೀಜಿ ಹೇಳಿಕೆ

 

ಬಂಟ್ವಾಳ: ಋಣಾತ್ಮಕ ಪರಿಕಲ್ಪನೆಗಳು ಸಮಾಜದಲ್ಲಿ ಹೆಚ್ಚಾಗುತ್ತಿದ್ದು ಮನುಷ್ಯ ಸಕರಾತ್ಮಕ ಚಿಂತನೆಗಳತ್ತ ಮನಸ್ಸು ಕೇಂದ್ರಿಕರಿಸಬೇಕಾಗಿದೆ. ಪ್ರತಿ ಮನೆ ಮನೆಗಳಲ್ಲಿ ಪ್ರೀತಿ, ಬಾಂದವ್ಯ ಬೆಳೆಸುವ ಕಾರ್ಯಗಳಾಗಬೇಕು, ಮನೆಮಂದಿಯೆಲ್ಲಾ ಒಂದು ಹೊತ್ತದಾರೂ ಮನೆಯಲ್ಲಿ ಜತೆಯಿರುವ ಕೆಲಸಗಳಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಇದರ ಆಶ್ರಯದಲ್ಲಿ ಬಿ.ಸಿ. ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಶ್ರೀ ಗುರು ಪಾದುಕಾ ಪೂಜೆ ನೆರವೇರಿಸಿದ ಬಳಿಕ ಶ್ರೀ ಧಾಮ ಸೇವಾ ಪ್ರಕಲ್ಪವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಪರಿಸರ ಸಂರಕ್ಷಣೆಯ ಜೊತೆಗೆ ಸಮಾಜದ ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಶ್ರೀಧಾಮ ಸೇವಾ ಪ್ರಕಲ್ಪ ಮಾಡಲಿದೆ ಎಂದರು.
ಪ್ರಗತಿಪರ ಕೃಷಿಕ ರಾಜೇಶ್‌ನಾಕ್ ಉಳಿಪಾಡಿಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭತ್ತದ ಬೆಳೆ ಗದ್ದೆಗಳಲ್ಲಿ ನಳನಳಿಸಬೇಕು. ನಮಗೆ ಬೇಕಾಗುವಷ್ಟು ಆಹಾರವನ್ನು ಉತ್ಪಾದಿಸುವಲ್ಲಿ ಸ್ವಾವಲಂಬಿಗಳಾಗಬೇಕು ಎಂದರು. ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮುಂಬಯಿಯ ಶ್ರೀ ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಭಾಸ್ಕರ ಎಂ. ಶೆಟ್ಟಿ, ದಯಾನಂದ ಬಂಗೇರ, ರೈತ ಸಂಘದ ಜಿಲಾ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ, ಉಪಸ್ಥಿತರಿದ್ದರು. ಪರಿಸರ ಸಂರಕ್ಷೆಯ ಅಂಗವಾಗಿ ಗಿಡನೆಟ್ಟು ಸ್ಥಳೀಯ ಭತ್ತದ ಗದ್ದೆಯಲ್ಲಿ ಬೀಜ ಮುಹೂರ್ತವನ್ನು ಮಾಣಿಲ ಶ್ರೀಗಳು ನೆರವೆರಿಸಿದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply