Header Ads
Breaking News

ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಿದ ಸಮಾಜಸೇವಕರು : ಮಂಜೇಶ್ವರ ಸಾಯಿ ಆಶ್ರಮದಲ್ಲಿ ನೆಲೆ ಕಲ್ಪಿಸಿದ ವಿಶು ಶೆಟ್ಟಿ

ದೌರ್ಜನ್ಯಕ್ಕೆ ಒಳಪಡುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ಮಹಿಳಾ ಪೋಲಿಸರ ಸಹಾಯದಿಂದ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ರಕ್ಷಿಸಿ ಮಂಜೇಶ್ವರ ಸಾಯಿ ಆಶ್ರಮದಲ್ಲಿ ನೆಲೆ ಕಲ್ಪಿಸಿದ ಮಾನವೀಯತೆ ಮೆರೆದಿದ್ದಾರೆ.ಕಳೆದ ಮೂರು ತಿಂಗಳುಗಳಿಂದ ಸುಮಾರು 55 ವರ್ಷ ಪ್ರಾಯದ ಮಾನಸಿಕ ಅಪರಿಚಿತ ಮಹಿಳೆಯೊರ್ವಳು ಮಲ್ಪೆ ಬಂದರು ಪ್ರದೇಶದಲ್ಲಿ ನೆಲೆ ಕಂಡಿದ್ದಳು. ಮಹಿಳೆಗೆ ಪುರ್ನವಸತಿ ಕಲ್ಪಿಸುವಂತೆ ಈ ಮೊದಲು ಸಂಬಂಧ ಪಟ್ಟವರಿಗೆ ದೂರು ನೀಡಿದ್ದರು. ಆದರೆ ಅಧಿಕಾರಿ ವರ್ಗದವರು ಸ್ಪಂದಿಸಿರಲಿಲ್ಲ. ರಾತ್ರಿ ಸಮಯ ಆಗುಂತಕನೊರ್ವ ಮಹಿಳೆ ಜಟ್ಟಿ ಪ್ರದೇಶದಲ್ಲಿ ಮಲಗಿರುವ ಸಂದರ್ಭ ದೌರ್ಜನ್ಯ ನಡೆಸಿರುವುದು ತಿಳಿದು ಬಂದಿದೆ. ಮಹಿಳೆ ಬೊಬ್ಬಿಟ್ಟಾಗ ಆಗುಂತಕ ಪರಾರಿಯಾಗಿದ್ದಾನೆ, ಹಿಡಿಯುವ ವಿಫಲವಾಗಿದೆ ಎಂದು ಸ್ಥಳಿಯರು ಹೇಳಿಕೊಂಡಿದ್ದಾರೆ.
ಘಟನೆಯ ಬಗ್ಗೆ ಸ್ಥಳಿಯರಿಂದ ಮಾಹಿತಿ ಪಡೆದ ಸಮಾಜಸೇವಕ ವಿಶು ಶೆಟ್ಟಿಯವರು ಮಹಿಳಾ ಠಾಣೆಯ ಎ.ಎಸ್.ಐ ಮುಕ್ತ ಸಿಬ್ಬಂದಿಗಳಾದ ರುದ್ರಮ, ಸವಿತಾ ಅವರ ಸಹಾಯದಿಂದ ಮಹಿಳೆಯನ್ನು ಮಲ್ಪೆ ಜಟ್ಟಿ ಪ್ರದೇಶದಲ್ಲಿ ರಕ್ಷಿಸಿದ್ದಾರೆ. ನಂತರ ಮಹಿಳೆಯನ್ನು ಮಂಜೇಶ್ವರದಲ್ಲಿರುವ ಶ್ರೀಸಾಯಿನಿಕೇತನ ಸೇವಾಶ್ರಮದಲ್ಲಿ ಆಶ್ರಯ ಕಲ್ಪಿಸಿದ್ದಾರೆ. 

Related posts

Leave a Reply

Your email address will not be published. Required fields are marked *