Header Ads
Breaking News

ಮಾನಸಿಕ ಅಸ್ವಸ್ಥ ಯುವಕನ ಬಾಳಲ್ಲಿ ಬೆಳಕು ಮೂಡಿಸಿದ ಆಪತ್ಬಾಂಧವ

ಮಂಗಳೂರು: ಮಂಗಳೂರಿನ ಕಾರ್‍ಸ್ಟ್ರೀಟ್ ಬಳಿ ಸುಮಾರು ಮೂರೂವರೆ ವರ್ಷಗಳಿಂದ ಜನರಿಗೆ ಕಲ್ಲೆಸೆದು ಗಾಯಗೊಳಿಸುತ್ತಿದ್ದ, ಅಂಗಡಿಗಳಿಗೆ ಕಲ್ಲು ಎಸೆದು ಗಾಜು ಪುಡಿ ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನ ಬಾಳಲ್ಲಿ ಕೊನೆಗೂ ಬೆಳಕು ಮೂಡಿದೆ. ಈ ಯುವಕನ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೂ ಈ ಯುವಕ ಪದೇ ಪದೇ ವಿಚಿತ್ರವಾಗಿ ವರ್ತಿಸುತ್ತಿದ್ದ. ಕೊನೆಗೆ ಸ್ಥಳೀಯರು ಮೈಮುನಾ ಫೌಂಡೇಶನ್ ನ ಆಸಿಫ್ ಆಪದ್ಬಾಂಧವರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಅನ್ವಯ ಆಗಸ್ಟ್ 8ರಂದು ಇವರ ತಂಡ ಯುವಕನನ್ನು ಹಿಡಿದು ಗಡ್ಡ, ತಲೆಕೂದಲು ಬೋಳಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಆಶ್ರಯ ನೀಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಒಂದು ತಿಂಗಳ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಯುವಕ ಚೇತರಿಸಿಕೊಂಡು ತನ್ನ ಮನೆಯವರನ್ನು ಸಂಪರ್ಕಿಸಿದ್ದಾನೆ. ಆತ ರಾಜಸ್ತಾನ ಮೂಲದವನಾಗಿದ್ದು, ಆತನ ಕುಟುಂಬದ ಸದಸ್ಯರು ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ರು. ಮಂಗಳೂರಿನ ಬಂದರು ಠಾಣೆ ಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಅವರ ಸಮ್ಮುಖದಲ್ಲಿ ಯುವಕನನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

Related posts

Leave a Reply

Your email address will not be published. Required fields are marked *