Header Ads
Header Ads
Breaking News

ಮಾನಸ ಸರೋವರದಲ್ಲಿ ಸಿಕ್ಕಿಕೊಂಡಿರುವ ಯಾತ್ರಿಗಳು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ನೇಪಾಳದಲ್ಲಿ ಸಿಲುಕಿಕೊಂಡಿರುವ ಭಾರತೀಯ ಯಾತ್ರಾತ್ರಿಗಳನ್ನು ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನೇಪಾಳದ ಸಿಮಿಕೋಟಿಯಲ್ಲಿ 400ರಿಂದ 500 ಯಾತ್ರಿಗಳು ಸಿಲುಕಿಕೊಂಡಿದ್ದಾರೆ. ಅದರಲ್ಲಿ ಬೆಂಗಳೂರು, ಮೈಸೂರಿನವರೇ ಹೆಚ್ಚು. ಮಂಡ್ಯ ಚಾಮರಾಜನಗರ, ಹಾಸನದ ಯಾತ್ರಿಗಳೂ ಇದ್ದಾರೆ.

ಈಗಾಗಲೇ ನೇಪಾಳದ ರಾಯಭಾರಿಯೊಂದಿಗೆ ಮಾತನಾಡಿದ್ದೇನೆ. ಎರಡು ದಿನಕ್ಕಾಗುವಷ್ಟು ಆಹಾರ ಲಭ್ಯವಿದ್ದು ತಂಗಲು ವಸತಿ ವ್ಯವಸ್ಥೆ ಮಾಡಲಾಗಿದೆ. ಶೀಘ್ರವಾಗಿ ಕಟ್ಮಂಡು ಮೂಲಕ ಯಾತ್ರಿಗಳನ್ನು ಭಾರಕ್ಕೆ ಕರೆ ತರಲಾಗುವುದು ಎಂದರು.

Related posts

Leave a Reply