Breaking News

ಮಾಬುಕಳ ಸೇತುವೆಯಲ್ಲಿ ಅಪರಿಚಿತ ವಾಹನ ಡಿಕ್ಕಿ, ಓರ್ವ ಸಾವು, ಮತ್ತೋರ್ವ ಗಂಭೀರ

ಗುರುವಾರ ರಾತ್ರಿ ಒಂಬತ್ತೂವರೆ ಸುಮಾರಿಗೆ ಸಾಸ್ತಾನ ಸಮೀಪದ ಮಾಬುಕಳ ಸೇತುವೆಯಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಕುಂದಾಪುರ ಕಡೆಯಿಂದ ಉಡುಪಿಯ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಉಚ್ಚಿಲ ಮೂಲದ ೩೦ರ ಹಸನಾಜ್ ಸಾವನ್ನಪ್ಪಿದರೆ ಹಿಂಬದಿ ಸವಾರ ತಾಹೀರ್ ಗಂಭೀರ ಗಾಯಗೊಂಡು ಬ್ರಹ್ಮಾವರ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಈರ್ವರೂ ಕುಂದಾಪುರದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಉಚ್ಚಿಲಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಢಿಕ್ಕಿ ಹೊಡೆದ ಅಪರಿಚಿತ ವಾಹನ ಪರಾರಿಯಾಗಿದ್ದು, ಸ್ಥಳೀಯರು ಅಪಘಾತದ ಸುದ್ದಿಯನ್ನು ಪೋಲಿಸರಿಗೆ ತಿಳಿಸಿದ್ದಾರೆ.
ಸುಮಾರು ಒಂದು ಗಂಟೆ ಕಾಲ ಇವರಿಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಯಾರೂ ಕೂಡ ಅವರ ರಕ್ಷಣೆಗೆ ಬಂದಿಲ್ಲ ಎಂದು ತಿಳಿದು ಬಂದಿದೆ. ಅನಂತರ ಸ್ಥಳಕ್ಕೆ ಸ್ಥಳೀಯರೋರ್ವರು ಬಂದ ಸಂದರ್ಭ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ಕಂಡು ಪೊಲೀಸರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೋಲಿಸರು ಆಗಮಿಸಿ ಗಾಯಾಳು ತಾಹೀರನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಈಗ ಘಟನೆ ಕುರಿತು ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದು, ಢಿಕ್ಕಿ ಹೊಡೆದು ತಪ್ಪಿಸಿಕೊಂಡು ಹೋದ ವಾಹನಕ್ಕಾಗಿ ಬಲೆ ಬೀಸಿದ್ದಾರೆ.

Related posts

Leave a Reply