Header Ads
Breaking News

‘ಮಾಯಾ ಕನ್ನಡಿ’ ಕನ್ನಡ ಚಲನಚಿತ್ರ : ಫೆಬ್ರವರಿ 28ರಂದು ಚಿತ್ರ ಬಿಡುಗಡೆ

ಸಿಪೊರಿಯಾ ಪಿಕ್ಚರ್ಸ್ ಲಾಂಛನದಲ್ಲಿ ಸಪ್ನಾ ಪಾಟೀಲ್ ನಿರ್ಮಾಣದ ಮಾಯಾ ಕನ್ನಡಿ ಚಲನಚಿತ್ರ ಪೆಬ್ರವರಿ 28ರಂದು ತೆರೆಗೆ ಅಪ್ಪಳಿಸಲಿದೆ ಎಂದು ಮಂಗಳೂರಿನಲ್ಲಿ ಚಿತ್ರತಂಡ ಮಾಹಿತಿ ನೀಡಿದೆ.

ತುಳುನಾಡು ಮೂಲದ ಮುಂಬೈ ಬೆಡಗಿ ಕಾಜಲ್ ಕುಂದರ್ ಮತ್ತು ಪ್ರಭು ಮುಂಡ್ಕೂರ್ ನಟನೆಯ ಮಾಯಾ ಕನ್ನಡಿ ಕರಾವಳಿಯಲ್ಲಿ ಫೆಬ್ರವರಿ 28ರಂದು ಬಿಡುಗಡೆಯಾಗಲಿದೆ. ಹಿಂದಿ, ಮರಾಠಿ ಹಾಗೂ ತುಳು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಬಹುಭಾಷಾ ನಟಿ ಕಾಜಲ್ ಕುಂದರ್ `ಮಾಯಾ ಕನ್ನಡಿ’ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟಿದ್ದಾರೆ. `ಮಾಯಾ ಕನ್ನಡಿ’ಗೆ ವಿನೋದ್ ಪೂಜಾರಿ ಕಥೆ ಹೆಣೆಯುವ ಜತೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಚಿತ್ರತಂಡದ ಪ್ರಕಾರ ಇದೋಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಒಂದು ಕಾಲೇಜು ಕ್ಯಾಂಪಸ್‍ನಲ್ಲಿ ನಡೆಯುವ ನಿಗೂಢ ಆತ್ಮಹತ್ಯೆಗಳ ಹಿಂದೆ ಬ್ಲೂವೇಲ್ ಗೇಮ್‍ನಂತಹ ಒಂದು ಆನ್‍ಲೈನ್ ಆಟ ಹೇಗೆಲ್ಲಾ ಕೆಲಸ ಮಾಡುತ್ತದೆ, ಅದನ್ನೇ ನೆಪವಾಗಿಟ್ಟು ಅಲ್ಲಿ ಹೇಗೆ ಮುಗ್ದ ವಿದ್ಯಾರ್ಥಿಗಳ ಕೊಲೆ ಪ್ರಕರಣಗಳು ನಡೆಯುತ್ತವೆ ಎನ್ನುವುದು ಈ ಚಿತ್ರದ ಒನ್‍ಲೈನ್ ಸ್ಟೋರಿ.

ಇನ್ನೂ ಇನ್ನೂ ಈ ಚಿತ್ರಕ್ಕೆ ಮಣಿ ಕೂಕಲ್ ನಾಯರ್ ಛಾಯಾಗ್ರಹಣ, ಅಭಿಷೇಕ್ ಎಸ್.ಎನ್. ಸಂಗೀತ, ಆನಂದ್ ರಾಜವಿಕ್ರಂ ಹಿನ್ನೆಲೆ ಸಂಗೀತ ಹಾಗೂ ಸುಜೀತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿದೆ. ಕೆ.ಎಸ್.ಶ್ರೀಧರ್, ಅನ್ವಿತಾ ಸಾಗರ್, ಅನೂಪ್ ಸಾಗರ್, ಅಶ್ವಿನಿರಾವ್ ಪಲ್ಲಕ್ಕಿ, ಕಾರ್ತಿಕ್ ರಾವ್ ತಾರಾಗಣದಲ್ಲಿದ್ದಾರೆ.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ನಟಿ ಕಾಜಲ್ ಕುಂದರ್, ಅನ್ವಿತಾ ಸಾಗರ್, ಅನೂಪ್ ಸಾಗರ್, ವಿನೋದ್ ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *