Header Ads
Header Ads
Breaking News

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪರಿಸರ ಸ್ನೇಹಿ ಗಣಪನ ಮೂರ್ತಿ

ಗಣೇಶ ಚತುರ್ಥಿ ಹತ್ತಿರ ಬರುತ್ತಿದ್ದಂತೆ ಗಣೇಶನ ಮೂರ್ತಿಯ ಬೇಡಿಕೆ ಹೆಚ್ಚಾಗುತ್ತದೆ.. ಈಗಾಗಲೇ ನಾನಾ ರೀತಿಯ ಆಕರ್ಷಕ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಸಾಮಾನ್ಯವಾಗಿ ಗಣೇಶನ ವಿಗ್ರಹಗಳನ್ನು ಆವೆ ಮಣ್ಣಿನಿಂದ ತಯಾರಿಸಿ, ರಾಸಾಯನಿಕ ಬಣ್ಣ ಬಳಿದು ಅಂದಗೊಳಿಸಲಾಗುತ್ತದೆ.. ಆದರೆ ಇಲ್ಲೋಬ್ರು ಪರಿಸರ ಪ್ರೇಮಿ ನಿತಿನ್ ಎಂಬುವವರು ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿದ್ದಾರೆ.. ಹೌದು, ಮಂಗಳೂರು ನಿವಾಸಿ ನಿತಿನ್ ಎಂಬುವರಿಗೆ ಪರಿಸರ ಮೇಲೆ ವಿಶೇಷ ಕಾಳಜಿ, ಹಾಗಾಗಿ ಗಣೇಶನ ವಿಗ್ರಹವನ್ನು ರಾಸಾಯನಿಕ ಮುಕ್ತವಾಗಿ ಮಾಡಬೇಕು ಅಂತ ಉದ್ದೇಶ ಇಟ್ಟುಕೊಂಡು ಹೊಸ ಪ್ರಯತ್ನ ಮುಂದಾಗಿದ್ದಾರೆ.

ಆಗ ರೂಪುಗೊಂಡದ್ದೇ ಈ ಆರ್ಗಾನಿಕ್ ಗಣಪ. ನಿತಿನ್ ಗಣೇಶನ ವಿಗ್ರಹವನ್ನು ಯಾವುದೇ ಮಣ್ಣು ಹಾಗೂ ರಾಸಾಯನಿಕ ವಸ್ತುಗಳಿಂದ ಬಳಸದೇ ತ್ಯಾಜ್ಯ ಪೇಪರ್‌ಗಳನ್ನು ಪಲ್ಪ್ ಮಾಡಿ ತಯಾರಿಸುತ್ತಿದ್ದಾರೆ.. ಸುಮಾರು ೮ ಇಂಚುಗಳ ಸಾವಯವ ಗಣಪತಿ ತಯಾರಿಸಿದ್ದು, ವಿಗ್ರಹದ ಒಳಗೆ ತರಕಾರಿ, ಹಣ್ಣಿನ ಬೀಜಗಳನ್ನು ಇಟ್ಟಿದ್ದಾರೆ. ಈ ಗಣೇಶನ ವಿಗ್ರಹಗಳನ್ನು ಮನೆಯ ಒಳಗೆ ಪಾಟ್‌ಗಳಲ್ಲೇ ವಿಸರ್ಜಿಸಬಹುದು. ಮೂರ್ತಿ ವಿಸರ್ಜನೆ ಬಳಿಕ ಬೀಜ ಮೊಳಕೆಯೊಡೆದು ಗಿಡವಾಗುತ್ತದೆ. ಕೇವಲ ಪರಿಸರ ಗಣಪತಿ ಮಾತ್ರವಲ್ಲದೇ ಕಾಗದದಿಂದಲೇ ತಯಾರಿಸಿ ಪೆನ್ ಪೆನ್ಸಿಲ್ ತಯಾರಿಸುತ್ತಿದ್ದು, ಇದರ ಒಳಭಾಗದಲ್ಲೂ ತರಕಾರಿ ಬೀಜಗಳನ್ನು ಇಡಲಾಗುತ್ತಿದೆ.

Related posts

Leave a Reply

Your email address will not be published. Required fields are marked *