Header Ads
Breaking News

ಮಾರುಕಟ್ಟೆ ನವೀಕರಣಗೊಳಿಸುವಂತೆ ಪ್ರತಿಭಟನೆ

ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಮಾರುಕಟ್ಟೆಯನ್ನು ನವೀಕರಣಗೊಳಿಸಬೇಕೆಂದು ಆಗ್ರಹಿಸಿ ಡಿವೈಎಫ್‌ಐನಿಂದ ಉರ್ವಸ್ಟೋರ್‌ನ ಮಾರುಕಟ್ಟೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.ಹಲವಾರು ವರ್ಷಗಳಿಂದ ಮಾರುಕಟ್ಟೆ ಕಾರ್ಯಾಚರಿಸುತ್ತಿದ್ದು, ಸ್ಥಳೀಯ ಪ್ರದೇಶದ ಕೋಡಿಕಲ್, ಚಿಲಿಂಬಿ, ದಡ್ಡಲ್‌ಕಾಡ್, ಕೊಟ್ಟಾರ, ಉರ್ವಸ್ಟೋರಿನ ನಾಗರಿಕರು ಈ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ಆದರೆ ಈ ಮಾರುಕಟ್ಟೆಯು ಹಲವಾರು ವರ್ಷಗಳಿಂದ ಅವ್ಯವಸ್ಥೆಯಿಂದ ಕೂಡಿದ್ದು, ಸ್ವಚ್ಛತೆಯೂ ಇಲ್ಲದಾಗಿದೆ. ಈ ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಸ್ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ನಗರಾಧ್ಯಕ್ಷ ನವೀನ್ ಕೊಂಚಾಡಿ, ಸ್ಥಳೀಯ ಮುಖಂಡರಾದ ಇಕ್ಬಾಲ್, ಮನೋಜ್ ಪ್ರಶಾಂತ್ ಎಂ ಬಿ, ಧನ್‌ರಾಜ್, ಪ್ರಶಾಂತ್ ಆಚಾರ್, ಸನತ್ ಮೊದಲಾದವರು ಉಪಸ್ಥಿತರಿದ್ದರು

Related posts

Leave a Reply