Header Ads
Header Ads
Breaking News

ಮಾರ್ಚ್ 26ರಂದು ಕಾಪು ಹಳೆ ಮಾರಿಯಮ್ಮ ದೇವಿಗೆ ಒಂದುಕೋಟಿ ರೂ. ವೆಚ್ಚದ ರಜತ ರಥ ಸಮರ್ಪಣೆ

ಕಾಪು ಹಳೆ ಮಾರಿಯಮ್ಮ ದೇವಿಗೆ ಭಕ್ತಾಧಿಗಳ ಸಹಕಾರದಿಂದ ನಿರ್ಮಾಣ ಮಾಡಿದ ರಜತರಥವನ್ನು ಮಾರ್ಚ್ ೨೬ರ ಕಾಲಾವಧಿ ಸುಗ್ಗಿ ಮಾರಿಪೂಜೆಯ ಪರ್ವ ಕಾಲದ ರಾತ್ರಿ ೯ ಗಂಟೆಗೆ ಸಮರ್ಪಿಸಲಿದ್ದೇವೆ ಎಂಬುದಾಗಿ ದೇವಳದ ಆಡಳಿತ ಮೋಕ್ತೇಸರ ಪ್ರಸಾದ್ ಶೆಣೈ ಹೇಳಿದ್ದಾರೆ.ಈ ಬಗ್ಗೆ ದೇವಳದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಜತರಥವು ಭಕ್ತಾಧಿಗಳ ಸಹಕಾರದಿಂದ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ, ಈ ರಥ ಮಾರಿಯಮ್ಮ ದೇವಿಗೆ ಸಮರ್ಪಣೆ ಮಾಡುವ ಮೊದಲು ನಮ್ಮ ದೇವಳದ ಪರಂಪರೆಯಂತೆ, ಕಾಪು ಲಕ್ಷ್ಮೀ ವೆಂಕಟರಮಣ ದೇವರ ಸನ್ನಿಧಿಗೆ ಸಂಯಮೀಂದ್ರ ತೀರ್ಥ ಶ್ರೀಗಳ ಮೂಲಕ ಸಮರ್ಪಣೆಯಾಗಲಿದೆ. ಆ ಬಳಿಕ ಶ್ರೀ ದೇವಿಯ ನೂತನ ರಜತರಥಯಾತ್ರೆಯು ಕಾಪು ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾದಿಂದ ಪ್ರಾರಂಭಗೊಂಡು ಪೇಟೆ ಮೂಲಕವಾಗಿ ಸಾಗಿ ಮಾರಿಯಮ್ಮನ ಸನ್ನಧಿ ತಲುಪಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ದೇವಳದ ಪ್ರಮುಖರಾದ ಶ್ರೀಧರ ಆನಂದ ಶೆಣೈ, ಸದಾಶಿವ, ರಾಜೇಶ್ ಶೆಣೈ, ಮೋಹನ್‌ದಾಸ್ ಶೆಣೈ, ರಾಮ್ ನಾಯಕ್ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *