Header Ads
Header Ads
Breaking News

ಮಾರ್ಚ್ 27ರಿಂದ ಏಪ್ರಿಲ್ 1ರ ವರೆಗೆ ಕುರ್ನಾಡು ಸೋಮನಾಥೇಶ್ವರ ದೇವಳದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಕಾರ್ಯಕ್ರಮ

ಉಳ್ಳಾಲ: ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದರ ಅಷ್ಟಬಂಧ ಸಹಸ್ರಕುಂಭಾಭಿಷೇಕ ಮಾ.27 ರಿಂದ ಎ.1 ರವರೆಗೆ ನಡೆಯಲಿದೆ ಎಂದು ಕುರ್ನಾಡು ಶ್ರೀ ಸೋಮನಾಥೇಶ್ವರ ಕ್ಷೇತ್ರ ಸಂಚಾಲಕ ಜಯರಾಮ ಶಾಂತ ಹೇಳಿದರು.

ಅವರು ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ವಿವರ ನೀಡಿದರು. ಮಾ.27 ರಂದು ವೈದಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಮುಖ್ಯ ಸಲಹೆಗಾರ ರಘುರಾಮ ತಂತ್ರಿ ಚಾಲನೆ ನೀಡಲಿದ್ದಾರೆ. ಮಾ.28 ರಂದು ಗಣಪತಿ ಹೋಮ, ಅಂಕುರ ಪೂಜೆ, ಬಿಂಬಶುದ್ಧಿ ಕಲಶಪೂಜೆ, ಪ್ರಾಯಶ್ಚಿತ್ತ ಹೋಮ, ಪ್ರೋಕ್ತ ಹೋಮ, ಮಾ.29 ರಂದು ವೈದಿಕ ಕಾರ್ಯಕ್ರಮ ಸಂಜೆ ಬಳಿಕ ಸಾಂಸ್ಕøತಿಕ ವೈಭವ, ಮಾತೃಸಂಗಮ ಧಾರ್ಮಿಕ ಸಭೆಯಲ್ಲಿ ನಡೆಯಲಿದೆ.ಮಾ.30 ರಂದು ವೈದಿಕ ಕಾರ್ಯಕ್ರಮಗಳು ಸಂಜೆ ಸ್ಥಳೀಯ ಪ್ರತಿಭೆಗಳ ಸಾಂಸ್ಕøತಿಕ ವೈಭವ ನಡೆಯಲಿದೆ.

ಎ.1 ರಂದು ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕ ಶಾಭಿಷೇಕ ಸಂಜೆ ಶ್ರೀಭೂತ ಬಲಿ, ನೃತ್ಯ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಲಿದೆ.ಧಾರ್ಮಿಕ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.

Related posts

Leave a Reply

Your email address will not be published. Required fields are marked *