Header Ads
Breaking News

ಮಾರ್ಚ್ 28ರಂದು ನಂದಳಿಕೆ ಆಯನೋತ್ಸವ-ಸಿರಿಜಾತ್ರೆ

ಕಾರ್ಕಳ : ಕಾರ್ಕಳ ತಾಲೂಕು ನಾಲ್ಕು ಸ್ಥಾನ, ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ಆಯನೋತ್ಸವ ಸಿರಿಜಾತ್ರಾ ಮಹೋತ್ಸವವು ಮಾ. 28 ರಂದು ನಡೆಯಲಿದ್ದು ಕೋವಿಡ್ ನಿಯಮಾವಳಿಯನ್ನು ಪಾಲಿಸಿಕೊಂಡು ಈ ಬಾರಿಯ ಸಿರಿ ಜಾತ್ರೆ ನಡೆಯಲಿದೆ ಎಂದು ನಂದಳಿಕೆ ಚಾವಡಿ ಅರಮನೆ ಎನ್. ಸುಹಾಸ್ ಹೆಗ್ಡೆ ಹೇಳಿದರು.

ಕಾರ್ಕಳದ ಖಾಸಗಿ ಹೊಟೇಲ್ ಸುದ್ದಿಗೋಷ್ಠಿ ಆಯೋಜಿಸಿ ಸಿರಿಜಾತ್ರೆಯ ಸಿದ್ಧತೆ ಕುರಿತು ಮಾತನಾಡಿದರು. ಸಿರಿಜಾತ್ರೆಗೆ ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಭಕ್ತಾದಿಗಳು ಪ್ರಮುಖವಾಗಿ ಮಹಾರಾಷ್ಟ್ರ, ಕೊಡಗು, ಚಿಕ್ಕಮಗಳೂರು, ಮಡಿಕೇರಿಗಳಿಂದ ಆಗಮಿಸುತ್ತಿದ್ದು ಈ ಬಾರಿಯ ಸಿರಿ ಜಾತ್ರೆಗೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತಾದಿಗಳಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರ ತಂಡ ಈಗಾಗಲೇ ಜಾತ್ರೆಯ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಕೇರಳ ಹಾಗೂ ತಮಿಳುನಾಡಿನಿಂದ ಯಾವುದೇ ಸಾಂಸ್ಕೃತಿಕ ಕಲಾ ತಂಡಗಳು ಆಗಮಿಸುತ್ತಿಲ್ಲ ಬದಲಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದರೊಂದಿಗೆ ಸ್ಥಳೀಯರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. 25 ರಂದು ಧ್ವಜಾರೋಹಣ ನಡೆಯಲಿದ್ದು, ಮಹಾರಂಗಪೂಜೆ ಹಾಗೂ ಉತ್ಸವ ಬಲಿ ನಡೆಯಲಿದೆ. 26ರಂದು ಕೆದಿಂಜೆ ಶ್ರೀ ಉರಿಬ್ರಹ್ಮರ ಸನ್ನಿಧಿಯಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. 27 ರಂದು ಸಾಮೂಹಿಕ ಅಶ್ಲೇಷ ಬಲಿ, ಅಂಬೋಡಿ ಬಲಿ, ಅಂಬೋಡಿ ಉತ್ಸವ ಬಲಿ ಜರಗಲಿದೆ. 28 ರಂದು ಸಂಭ್ರಮದ ನಂದಳಿಕೆ ಆಯನೋತ್ಸವ ಸಿರಿಜಾತ್ರೆ, ಎ. 1 ರಂದು ಮನ್ಮರಥೋತ್ಸವ ನಡೆಯಲಿದೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯದ ವ್ಯವಸ್ಥಾಪಕ ಪಿ. ರವಿರಾಜ್ ಭಟ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *