
ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ರಿ. ಮಂಗಳೂರು ಇದರ ವತಿಯಿಂದ ಮಾರ್ಚ್ 7ರಂದು ಭರತಮುನಿ ಜಯಂತಿ ಕಾರ್ಯಕ್ರಮವು ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ನ ಅಧ್ಯಕ್ಷ ಕಮಲಾಕ್ಷ ಆಚಾರ್ ಹೇಳಿದ್ರು.ಅವರು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಡಿ, ಮಾಹಿತಿ ನೀಡಿದ್ರು. ಕಾರ್ಯಕ್ರಮವನ್ನು ಹಿರಿಯ ನೃತ್ಯಗುರು ಉಳ್ಳಾಲ ಮೋಹನ ಕುಮಾರ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಲಿದ್ದಾರೆ. ವಿಧುಷಿ ಭ್ರಮರಿ ಶಿವಪ್ರಕಾಶ್ ಅವರು ಭರತಮುನಿಗೆ ನುಡಿ ನಮನ ಸಲ್ಲಿಸಲಿದ್ದು ನಂತರ ನೃತ್ಯಗುರುಗಳು ಹಾಗೂ ವಿದ್ಯಾರ್ಥಿಗಳಿಂದ ಪುಷ್ಪಾರ್ಚನೆ ನಡೆಯಲಿದೆ. ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಶಾಸಕ ಕೆ ಪ್ರತಾಪ ಸಿಂಹ ನಾಯಕ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ರು.ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಯುಕೆ ಪ್ರವೀಣ್, ಕಾರ್ಯದರ್ಶಿ ಚಂದ್ರಶೇಖರ್ ನಾವಡ, ಟ್ರಸ್ಟಿ ಸುರೇಶ್ ಅತ್ತಾವರ, ಕೋಶಾಧಿಕಾರಿ ಶ್ರೀಧರ್ ಹೊಳ್ಳ ಉಪಸ್ಥಿತರಿದ್ದರು.