Header Ads
Header Ads
Breaking News

ಮಾರ್ಚ್ 8ರಂದು ಸಹ್ಯಾದ್ರಿ ವಿಜ್‌ಕ್ವಿಜ್ ಗ್ರಾಂಡ್ ಫಿನಾಲೆ

ಸಹ್ಯಾದ್ರಿ ಕಾಲೇಜು ಆಪ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ, ವ್ಯವಹಾರಿಕಾ ಅಢಳಿತ ವಿಭಾಗವು ಸಹ್ಯಾದ್ರಿ ವಿಜ್‌ಕ್ವಿಜ್ 2019 ಗ್ರಾಂಡ್ ಫಿನಾಲೆ ಮಾರ್ಚ್ 8ರಂದು ನಡಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಹ್ಯಾದ್ರಿ ಕಾಲೇಜಿನ ಎಂ.ಬಿ.ಎ ವಿಭಾಗದ ನಿರ್ದೇಶಕರಾದ ಡಾ. ವಿಶಾಲ್ ಸಮರ್ಥ ತಿಳಿಸಿದರು.

ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹ್ಯಾದ್ರಿ ವಿಜ್‌ಕ್ವಿಜ್ ಕಾಲೇಜು ಹಂತ ಮತ್ತು ಸಹ್ಯಾದ್ರಿ ಕ್ಯಾಂಪಸ್ ಗ್ರಾಂಡ್ ಫಿನಾಲೆ ಎಂಬ ಎರಡು ಹಂತಗಳಲ್ಲಿ ನಡೆಯಲಿದೆ. ಸುಮಾರು 9000 ವಿದ್ಯಾರ್ಥಿಗಳು ಕಾಲೇಜ್ ಹಂತದಲ್ಲಿ ಭಾಗವಹಿಸಿದ್ದರು. ಇವರಲ್ಲಿ ಆಯ್ಕೆಯಾದ ಸುಮಾರು 950 ವಿದ್ಯಾರ್ಥಿಗಳು ಮಾರ್ಚ್ 8ರಂದು ನಡೆಯುವ ಸಹ್ಯಾದ್ರಿ ವಿಜ್‌ಕ್ವಿಜ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.ಬೆಳಿಗ್ಗೆ 9.30ಕ್ಕೆ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸಂಯೋಜಕರಾದ ಪ್ರೊ. ಗಿರೀಶ್ ಮಾಡ್ಲ, ಪ್ರೊ. ರಮೇಶ್ ಕೆ.ಜಿ. ಮಾಧ್ಯಮ ಸಲಹೆಗಾರ ವಸಂತ ಕೇದಿಗೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *