Breaking News

ಮಾಲೆಗಾಂವ್, ಭೀವಂಡಿ ಮಹಾನಗರಪಾಲಿಕೆಗಳು, ಅನಿವಾರ್ಯವಾಗಿ ಹಿಂದೂಗಳಿಗಿಂತ ಮುಸ್ಲಿಮರಿಗೆ ಸಿಕ್ಕ ಬಿಜೆಪಿ ಟಿಕೆಟ್

ಮಹಾರಾಷ್ಟ್ರದ ಮಾಲೇಗಾಂವ್ ಮತ್ತು ಭೀವಂಡಿ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮುಸ್ಲಿಂ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.
೮೪ ಸದಸ್ಯರನ್ನು ಹೊಂದಿರುವ ಮಾಲೇಗಾಂವ್ ಕಾರ್ಪೊರೇಷನ್ನಲ್ಲಿ ೫೦ ಸೀಟುಗಳಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ, ೩೦ ಸೀಟುಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ೯೦ ಸದಸ್ಯರನ್ನು ಹೊಂದಿರುವ ಭೀವಂಡಿಯಲ್ಲಿ ಬಿಜೆಪಿ ೫೭ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಇದರಲ್ಲಿ ೧೮ ಮಂದಿ ಮುಸ್ಲಿಂ ಅಭ್ಯರ್ಥಿಗಳಾಗಿದ್ದಾರೆ. ಚುನಾವಣೆಗೆ ಮುನ್ನವೇ ಬಿಜೆಪಿ ಇಲ್ಲಿ ಗೆದ್ದಿದೆ ಯಾಕೆಂದರೆ ಜನರ ಬಳಿ ತಲುಪಿದ್ದೇನೆ. ಬಿಜೆಪಿ ಮುಸ್ಲಿಂ ವಿರೋಧಿ ಎಂದು ಟೀಕಿಸುವವರಿದ್ದಾರೆ. ಆದರೆ ಚುನಾವಣೆ ಘೋಷಣೆಯಾದ ಹೊತ್ತಲ್ಲಿ ೧೭೦-೧೮೦ ಮುಸ್ಲಿಮರು ಟಿಕೇಟಿಗಾಗಿ ನಮ್ಮತ್ತ ಬಂದಿದ್ದಾರೆ. ಜನರ ಮನಸ್ಥಿತಿಯಲ್ಲುಂಟಾದ ಬದಲಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲವು ಎಂದು ಬಿಜೆಪಿ ರಾಜ್ಯ ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯ ನಿತಿನ್ ಪೊಫಾಲೆ ಹೇಳಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಮಾಲೇಗಾಂವ್ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಕಾಂಗ್ರೆಸ್ ಮತ್ತು ಜನತಾ ದಳವೇ ಆಡಳಿತ ನಡೆಸಿಕೊಂಡು ಬಂದಿದ್ದು, ಇಲ್ಲಿಯವರೆಗೆ ಬಿಜೆಪಿ ಅಧಿಕಾರಕ್ಕೇರುವುದು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿ ಬಿಜೆಪಿ ಇಷ್ಟೊಂದು ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಅಧಿಕಾರಕ್ಕೇರಲು ಕಾರ್ಯ ತಂತ್ರ ರೂಪಿಸಿದೆ.

Related posts

Leave a Reply