Breaking News

ಮಾವು ಫಸಲು ಪಡೆಯುವ ಆಧುನಿಕ ವಿಧಾನ, ಮೂಡಬಿದರೆಯ ಜರೆಗುಡ್ಡೆಯಲ್ಲಿ ಪ್ರಾತ್ಯಕ್ಷಿಕೆ


ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಬೋರುಗುಡ್ಡೆಯ ಹೇಮಚಂದ್ರ ಅವರ ಮಾವಿನ ತೋಪಿನಲ್ಲಿ ಜಲಗಾಂವ್‌ನ ಜೈನ್ ಇರಿಗೇಶನ್‌ನ ತಂತ್ರಜ್ಞರಿಂದ ಕಸಿ ಕಟ್ಟಿದ ಮಾವಿನ ಗಿಡಗಳಿಂದ ಆರಡಿ ಎತ್ತರದಲ್ಲಿ ಮಾವಿನ ಫಸಲನ್ನು ಪಡೆಯುವ ಆಧುನಿಕ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಜಲಗಾಂವ್‌ನ ಜೈನ್ ಇರಿಗೇಶನ್ ಕಂಪೆನಿಯ ಬೆಂಗಳೂರು ಘಟಕದ ತಂತ್ರಜ್ಞ ಶ್ರೀನಿವಾಸ ನಾಯಕ್ ಅವರು ಮಾತನಾಡಿ ಮಾವಿನ ಗಿಡಗಳನ್ನು ಆರಡಿ ಎತ್ತರದಲ್ಲೇ ಇರುವಂತೆ ಕಟಿಂಗ್ ಮಾಡುತ್ತ ಸೂರ್ಯನ ಬೆಳಕು, ಗಾಳಿ ಆಡುವಂತೆ ಮಾಡಿ ಒಟ್ಟು ಗಿಡಗಳು ಕಮಲದ ದಳಗಳಂತೆ ಗೋಚರಿಸುವಂತೆ ಮಾಡುವ ಈ ಪ್ರಕ್ರಿಯೆ ಸಮರ್ಪಕವಾಗಿ ನಡೆದರೆ ಒಂದು ಎಕ್ರೆಗೆ ಈಗಿನ ದರದಲ್ಲಿ ಏನಿಲ್ಲವೆಂದರೂ ರೂ. ೩ ಲಕ್ಷದಿಂದ ೫ ಲಕ್ಷದವರೆಗೂ ಸಂಪಾದಿಸಲು ಸಾಧ್ಯವಿದೆ ಎಂದರು.
ದರೆಗುಡ್ಡೆಯಲ್ಲಿರುವ ತಮ್ಮ ಫಾರ್ಮ್‌ನಲ್ಲಿ ಮಾವಿನ ಗಿಡಗಳನ್ನು ನೆಟ್ಟು ಕೊಂಬೆಗಳನ್ನು ಲೆಕ್ಕಾಚಾರದಿಂದ ಸವರುವ ಮೂಲಕ ಒಳ್ಳೆಯ ಫಲಿತಾಂಶವನ್ನು ಕಂಡಿರುವ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬಲಂಗಡಿ ಅವರ ಹಿರಿತನದಲ್ಲಿ ಬೋರುಗುಡ್ಡೆಯ ಪ್ರಗತಿಪರ ಕೃಷಿಕ ಹೇಮಚಂದ್ರ ಜೈನ್ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು.

Related posts

Leave a Reply