Header Ads
Breaking News

ಮಾಸ್ಕ್ – ಅಂತರ, ಮೈಮರೆಯದಂತೆ ಸಂದೇಶ ನೀಡುವ ನಕ್ಷತ್ರ : ಪರಿಸರ ಸಹ್ಯ ನಕ್ಷತ್ರದ ಮೂಲಕ ಗಮನ ಸೆಳೆದ ‘ಲೈಫ್ ಸೇವಾ ಸಂಸ್ಥೆ’

ಕೋವಿಡ್ ಕಾಲ ಮುಗಿಯುವ ಹಂತದಲ್ಲಿ ಮಾಸ್ಕ್, ಅಂತರ ಮರೆತು ಮೈಮರೆಯಬೇಡಿ ಎಂಬ ಸಂದೇಶದೊಂದಿಗೆ ಈ ಬಾರಿ ಬೃಹದಾಕಾರದ ಕ್ರಿಸ್ಮಸ್ ನಕ್ಷತ್ರವೊಂದು ಸಂದೇಶ ನೀಡುತ್ತಿದೆ. ಕಳೆದ 8 ವರ್ಷಗಳಿಂದ ಒಂದಿಲ್ಲೊಂದು ಸಾಮಾಜಿಕ ಸಂದೇಶಗಳ ಮೂಲಕ ಗಮನ ಸೆಳೆಯುತ್ತಿರುವ ಶಿರ್ತಾಡಿಯ ‘ಲೈಫ್ ಸೇವಾ ಸಂಸ್ಥೆ’ಯು ಈ ಬಾರಿ ವಿಶಿಷ್ಟ ಹಾಗೂ ಪರಿಸರ ಸಹ್ಯ ನಕ್ಷತ್ರದ ಮೂಲಕ ಗಮನ ಸೆಳೆದಿದ್ದಾರೆ. ಕೊರೋನಾ ಜಾಗೃತಿಯ ಜೊತೆಗೆ ಮಾಸ್ಕ್ ಹಾಗೂ ದೈಹಿಕ ಅಂತರದ ಪ್ರಾಮುಖ್ಯತೆ ವಿವರಿಸುವ ಈ ನಕ್ಷತ್ರವನ್ನು ಸಂಪೂರ್ಣವಾಗಿ ನೈಸರ್ಗಿಕವಾಗಿ ತಯಾರಿಸಲಾಗಿದೆ. ಬಿದಿರು ಹಾಗೂ ಬಟ್ಟೆಯ ಮಾಸ್ಕ್, ಮೈದಾ ಹಿಟ್ಟು ಬಳಸಲಾಗಿದ್ದು, ಸ್ಯಾನಿಟೈಸರ್ ಹಾಗೂ ಕೊರೋನಾ ವೈರಸ್ ಆಕೃತಿಯನ್ನು ನಕ್ಷತ್ರದಲ್ಲಿ ಸೇರಿಸಲಾಗಿದೆ. ಶಿರ್ತಾಡಿಯ ಪ್ರಸನ್ನ ಜೊಯೆಲ್ ಸಿಕ್ವೇರಾ ತನ್ನ ಸ್ನೇಹಿತರಾದ ಯತೀಶ್ ಕುಲಾಲ್ ಶಿರ್ತಾಡಿ ಹಾಗೂ ನವೀನ್ ಶೆಟ್ಟಿ ಶಿರ್ತಾಡಿಯವರ ಜೊತೆಗೂಡಿ ಒಟ್ಟು 8 ದಿನಗಳ ಶ್ರಮದ ಮೂಲಕ ತಯಾರಿಸಿದ್ದು, ಸಮಾಜದಲ್ಲಿ ಆರೋಗ್ಯ ಭದ್ರತೆ ಹಾಗೂ ಜಾಗೃತಿ ಹರಡಬೇಕು ಎಂಬ ಉದ್ದೇಶವನ್ನು ಹೊಂದಿದ್ದಾರೆ.

Related posts

Leave a Reply

Your email address will not be published. Required fields are marked *