Header Ads
Breaking News

ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಎಚ್ಚರಿಕೆ : ಉಡುಪಿ ಸಿಟಿಯಲ್ಲಿ ಡಿಸಿ ಅವರಿಂದ ಕಾರ್ಯಾಚರಣೆ

ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಏಕಾಏಕಿ ಉಡುಪಿ ಸಿಟಿ ಎಲ್ಲೆಡೆ ಸುತ್ತಾಡಿ ಮಾಸ್ಕ್ ಹಾಕದವರಿಗೆ ದಂಡ ಹಾಕಿದ್ದಲ್ಲದೆ ಮುಂದಿನ ದಿನದಲ್ಲಿ ಕ್ರಿಮಿನಲ್ ಕೇಸು ಜಡಿಯುವ ಎಚ್ಚರಿಕೆ ನೀಡಿದ್ದಾರೆ.

ಮಾಸ್ಕ್ ಇಲ್ಲದೆ ಸುತ್ತಾಡುತ್ತಿದ್ದ ಜನ ಸಾಮಾನ್ಯರಿಗೆ ಹಾಗೂ ಬಸ್ ಚಾಲಕ, ನಿರ್ವಾಹಕರಿಂದ ನೂರು ರೂಪಾಯಿಯಂತೆ ದಂಡ ವಸೂಲಿ ನಡೆಸಿದರೆ, ಅಂಗಡಿ ಮಾಲಿಕರು ಮಾಸ್ಕ್ ಧರಿಸದಿದ್ದರೆ ನೇರವಾಗಿ ಐದು ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಕೆಲವು ಅಂಗಡಿಗಳಲ್ಲಿ ದಂಡ ನೀಡಲು ನಿರಾಕರಿಸಿದಾಗ ಅಂಗಡಿ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನು ನೀಡಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಇಂದಿನ ಈ ಕಾರ್ಯಚರಣೆ ನಡೆಸಲಾಗಿದೆ. ಜನರು ಕೊರೋನಾ ನಮ್ಮಲ್ಲಿ ಇಲ್ಲವೇ ಇಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಬಹಳಷ್ಟು ಮಂದಿ ಮಾಸ್ಕ್ ಹಾಕುವುದನ್ನೇ ಮರೆತವರಿಗೆ ಇಂದು ಚುರುಕು ಮುಟಿಸಲಾಗಿದೆ. ಇಷ್ಟರಲ್ಲಿ ನಮ್ಮ ಜಿಲ್ಲೆಯನ್ನು ಲಾಕ್ ಡೌನ್ ಮಾಡುವ ಯಾವುದೇ ಅಲೋಚನೆ ಇಲ್ಲ, ಕಾರಣ ದಿನವೊಂದಕ್ಕೆ ನಾಲ್ಕು ನೂರು ಕೊರೋನಾ ಕೇಸುಗಳು ದಾಖಲಾದ ಸಂದರ್ಭದಲ್ಲೂ ನಮ್ಮ ಜಿಲ್ಲೆಯ ಜನರ ಸಹಕಾರದಿಂದ ಲಾಕ್ ಡೌನ್ ಮಾಡದೆ ನಿಯಂತ್ರಿಸಿದ್ದೇವೆ ಆ ಕಾರಣದಿಂದ ಲಾಕ್ ಡೌನ್ ಬಗ್ಗೆ ಚಿಂತಿಸಿಲ್ಲ. ಆದರೆ ಜನ ಎಚ್ಚರ ತಪ್ಪಿ ಮಾಸ್ಕ್ ಧರಿಸದೆ ಜನ ಸಾಮಾನ್ಯರ ಪ್ರಾಣದ ಜೊತೆ ಚೆಲ್ಲಾಟವಾಡಿದರೆ ಅವರ ವಿರುದ್ಧ ದಂಡ ಮಾತ್ರವಲ್ಲ ಕ್ರಿಮಿನಲ್ ಕೇಸು ಕೂಡಾ ದಾಖಲಿಸಲಾಗುವುದೆಂದು ಎಚ್ಚರಿಸಿದರು.

Related posts

Leave a Reply

Your email address will not be published. Required fields are marked *