Breaking News

ಮಾಸ್ತಿಕಟ್ಟೆ ಶಾಲೆಯ ಕೋಣೆಗೆ ಟೈಲ್ಸ್ ಹಾಕಿಸುವೆ ಅಭಯಚಂದ್ರ ಘೋಷಣೆ

 

ಮೂಡುಬಿದಿರೆ, : ಮಾಸ್ತಿಕಟ್ಟೆ ಶಾಲೆಯಲ್ಲಿ ಟೈಲ್ಸ್ ಹಾಕಿರುವ ನಲಿಕಲಿ ಕೊಠಡಿಯನ್ನು ಶಾಸಕ ಕೆ. ಅಭಯಚಂದ್ರ ಜೈನ್ ಮಂಗಳವಾರ ಉದ್ಘಾಟಿಸಿದರು. ನಂತರ ನಡೆದ ಶೂ ಮತ್ತು ನೋಟು ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಒಂದಲ್ಲ ಎರಡು ಕೊಠಡಿಗಳಿಗೆ ಒಂದು ಲಕ್ಷ ವೆಚ್ಚದಲ್ಲಿ ಟೈಲ್ಸ್ ಹಾಕಿಸೋವೆ ಎಂದು ಘೋಷಿಸಿದರು.

ಶಾಲೆಯ ವಿದ್ಯಾರ್ಥಿನಿ ಅನನ್ಯ ವೇದಿಕೆಯೇರಿ ತನ್ನ ಅನಿಸಿಕೆಯನ್ನು ಹಂಚಿಕೊಳ್ಳುತ್ತಾ ‘ನಮ್ಮ ಶಾಲೆಯ ನಲಿಕಲಿ ಕೊಠಡಿಗೆ ರೂ. ೫೦,೦೦೦ ಅನುದಾನದಿಂದ ಟೈಲ್ಸ್ ಹಾಕಿಸಿಕೊಟ್ಟ ನಮ್ಮ ನೆಚ್ಚಿನ ಶಾಸಕರಾದ ಅಭಯಚಂದ್ರ ಅವರಿಗೆ ನಮ್ಮ ನಿಮ್ಮೆಲ್ಲರ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಸರ್, ದಯವಿಟ್ಟು ನಮ್ಮ ಶಾಲೆಯ ಎಲ್ಲ ಕೊಠಡಿಗಳಿಗೆ ಟೈಲ್ಸ್ ಹಾಕಿಸಿಕೊಡಿಸಿ ಸರ್’ ಎಂದು ವಿನಂತಿಸಿದ್ದು ಈ ಸಂದರ್ಭದಲ್ಲಿ ಬೇರೆ ಕೋಣೆಗೂ ಟೈಲ್ಸ್ ಹಾಕಿಸಿಕೊಡುವುದಾಗಿ ವಿದ್ಯಾರ್ಥಿನಿಗೆ ಭರವಸೆಯನ್ನು ನೀಡಿದರು.


ಸರಕಾರ ಶಾಲಾ ಮಕ್ಕಳಿಗೆ ಬಿಸಿಯೂಟ, ಹಾಲು, ಶೂ, ಪುಸ್ತಕ, ಸಮವಸ್ತ್ರ ಎಲ್ಲವನ್ನೂ ಕೊಡುತ್ತದೆ; ಅದನ್ನು ಸದುಪಯೋಗಪಡಿಸಿಕೊಂಡು ಮುಂದೆ ಬನ್ನಿ. ನಾನೂ ಕನ್ನಡ ಮಾಧ್ಯಮದಲ್ಲಿ ಓದಿದ್ದು. ನನ್ನರಾಜಕೀಯ ಗುರು, ಈ ರಾಜ್ಯದ ಮುಖ್ಯಮಂತ್ರಿ ವೀರಪ್ಪ ಮೊಲಿ ಅವರೂ ಓದಿದ್ದು ಕನ್ನಡ ಮಾಧ್ಯಮದಲ್ಲೇ. ಈ ಶಾಲೆಯಲ್ಲಿ ಕಲಿತವರೂ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಚೆನ್ನಾಗಿ ಓದಿರಿ. ಉಜ್ವಲ ಭವಿಷ್ಯ ನಿಮಗಿರಲಿ’ ಎಂದು ಅಭಯಚಂದ್ರ ಹಾರೈಸಿದರು.

ಸಿ‌ಆರ್‌ಪಿ ಡೇಸಿ ಅವರು ಈ ಶಾಲೆಯಲ್ಲಿ ಮೂವರೇ ಶಿಕ್ಷಕರಿದ್ದು ಕನಿಷ್ಟ ಓರ್ವ ಶಿಕ್ಷಕಿಯನ್ನು ನಿಯೋಜಿಸಬೇಕಾಗಿ ಶಾಸಕರಲ್ಲಿ ವಿನಂತಿಸಿದರು.

ವಾರ್ಡ್ ಸದಸ್ಯೆ ಪ್ರೇಮಾ ಸಾಲ್ಯಾನ್, ಎಸ್‌ಡಿ‌ಎಂಸಿ ಅಧ್ಯಕ್ಷ ಸೆಲ್ವಕುಮಾರ್, ಶಾಲಾ ಹಿತೈಷಿಗಳಾದ ಪೃಥ್ವೀರಾಜ್ ಜೈನ್, ಟೈಲ್ಸ್ ಕಾಮಗಾರಿ ನಡೆಸಿದ ಗ್ರಾ.ಪಂ. ಸದಸ್ಯ ಜಯರಾಮ ಬಂಗೇರ, ಪುಸ್ತಕ ದಾನಿಗಳಾದ ದಿವ್ಯವರ್ಮ ಪರವಾಗಿ ಕಾರ್ತಿಕ್ ಮೊಗೆರಾಯ, ಸತೀಶ್ ಶೆಟ್ಟಿ ಪರವಾಗಿ ವಸಂತ ಶೆಟ್ಟಿ , ಬಿ‌ಆರ್‌ಪಿಗಳಾದ ಸುಜಾತ, ವಿನುತಾ, ಶಾಲಾ ಮುಖ್ಯಮಂತ್ರಿ ಪ್ರಖ್ಯಾತ್ , ಪ್ರೆಸ್‌ಕ್ಲಬ್ ನಿಕಟಪೂರ್ವ ಅಧ್ಯಕ್ಷರು ಉಪಸ್ಥಿತರಿದ್ದರು.

Related posts

Leave a Reply