Header Ads
Breaking News

ಮಾಸ್ತಿಕಟ್ಟೆ ಸರಕಾರಿ ಶಾಲೆಯ ವಾರ್ಷಿಕೋತ್ಸವ

ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರಿರುವುದು ಸರಕಾರಿ ಶಾಲೆಗಳಲ್ಲಿ. ಸರಕಾರಿ ಶಾಲೆಗಳು ಉಳಿದರೆ ದೇಶಕ್ಕೆ ಭವಿಷ್ಯ. ಸಮುದಾಯದ ಸಹಭಾಗಿತ್ವದಲ್ಲಿ ಮಾತೃಭಾಷೆಯ ಶಿಕ್ಷಣ ಸಂಸ್ಥೆಗಳು ನಡೆದರೆ ಅವು ಸಮಾಜಕ್ಕೆ ಆಸ್ತಿಯಾಗಿ ಉಳಿಯುತ್ತವೆ ಎಂದು ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು. ಅವರು ದ.ಕ ಜಿ.ಪಂ ಹಿ.ಪ್ರಾ.ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘ ಮಾಸ್ತಿಕಟ್ಟೆ ಇದರ ವತಿಯಿಂದ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿ ಪ್ರಸಾದ್ ಕುಮಾರ್, ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿದ್ದ ಪ್ರಫುಲ್ಲಾ ಮೋಹನದಾಸ ಶೆಟ್ಟಿ ಮತ್ತು ಕಳೆದ 20ವರ್ಷಗಳಿಂದ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿಮಣಿ ಅವರನ್ನು ಸನ್ಮಾನಿಸಲಾಯಿತು. ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಅನಂತಪದ್ಮನಾಭ ಪೆಜತ್ತಾಯ, ಲಾಡಿಗುತ್ತು ಪಾಶ್ರ್ವನಾಥ ಬಲ್ಲಾಳ್, ಮಾಜಿ ಸೈನಿಕ ಪ್ರಭಾಕರ ಶೆಟ್ಟಿ, ಉದ್ಯಮಿಗಳಾದ ಪ್ರಥ್ವಿರಾಜ್ ಜೈನ್, ಜಯರಾಮ್ ಶೆಟ್ಟಿ, ಕುಮಾರ್ ಹಾಗೂ ಮತ್ತಿತರರು ಭಾಗವಹಿಸಿದ್ರು.

ಇನ್ನು ಶಾಲೆಯಲ್ಲಿ ತಮ್ಮ ಮಕ್ಕಳ ಡ್ಯಾನ್ಸ್, ಸ್ಕಿಟ್‍ಗಳ ಮಧ್ಯೆಯೇ ಶಿಕ್ಷಕಿಯರು ಕೂಡಾ ಜನಪದ ನೃತ್ಯ ರೂಪಕ ಮತ್ತು ಯಕ್ಷಗಾನದ ನೃತ್ಯವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದು ಇತರ ಎಲ್ಲಾ ಶಾಲೆಯ ಶಿಕ್ಷಕ-ಶಿಕ್ಷಕಿಯರಿಗೆ ಮಾದರಿಯಾದರು.

Related posts

Leave a Reply

Your email address will not be published. Required fields are marked *