Header Ads
Header Ads
Breaking News

ಮಾಹಿತಿ ಹಕ್ಕಿನ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಆವರಣ ರಜತಾದ್ರಿಯಲ್ಲಿ ಮಾಹಿತಿ ಹಕ್ಕು 2005 ಮತ್ತು ಮಾಹಿತಿಹಕ್ಕು ಬದಲಾವಣೆ 2019 ರ ಬಗ್ಗೆ ಮತ್ತು ಮಾಹಿತಿ ಹಕ್ಕಿನ ಹಲವಾರು ಬೆಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಯು ನಡೆಯಿತು.ಈ ಪ್ರತಿಭಟನೆಯಲ್ಲಿ ಹಿರಿಯ ನಾಗರಿಕ ಹಾಗೂ ಮಾಸ್ ಇಂಡಿಯಾ ದ ಕರ್ನಾಟಕದ ಅಧ್ಯಕ್ಷನಾದ ಜಿ ಎ ಕೋಟೆಯಾರ್ ಮತ್ತಿತರ ಬೆಂಬಲಿಗರು ಭಾಗವಹಿಸಿದ್ದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಸ್ ಇಂಡಿಯಾದ ಅಧ್ಯಕ್ಷರಾದ ಜಿ ಎ ಕೋಟೆಯಾರ್, ಕಳೆದ ಕೆಲವು ವರ್ಷಗಳಿಂದ ನಮ್ಮ ದೇಶದಲ್ಲಿ 80 ಮಾಹಿತಿ ಸೇವಾ ಕಾರ್ಯಕರ್ತರನ್ನು ಕೊಲೆ ಮಾಡಿರುತ್ತಾರೆ ಈ ಬಗ್ಗೆ ಯಾವುದೇ ಸರಕಾರವು ಕಾನೂನು ಕಟ್ಟಳೆಯನ್ನು ಇಂದಿಗೂ ಮಾಡಿಲ್ಲ. ಮಾಹಿತಿ ಹಕ್ಕಿನ ಅಧಿಕಾರಿಗಳ ಮುಂದೆ ಸಾವಿರಾರು ಕೇಸುಗಳಿದ್ದರೂ ಅದನ್ನು ಕೇಳುವವರಿಲ್ಲ ಇಂತಹ ಸಂಧರ್ಭದಲ್ಲಿ ಚೀಫ್ ಇನ್ಫಾರ್ಮೇಶನ್ ಕಮಿಶನರ್ ಮತ್ತು ಸ್ಟೇಟ್ ಇನ್ಫಾರ್ಮೇಶನ್ ಕಮಿಶನರ್ ರವರ ಅಧಿಕಾರ ಅವಧಿಯನ್ನು ಕಡಿಮೆ ಮಾಡಿ ಕೇವಲ ಕಾರಕೂನನಾಗಿ ಕೆಲಸ ಮಾಡುವಂತೆ ಮಾಡಿದೆ ಎಂದರು.ಮಾಸ್ ಇಂಡಿಯಾದ ಹಲವಾರು ಬೆಂಬಲಿಗರು,ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.

Related posts

Leave a Reply

Your email address will not be published. Required fields are marked *