Header Ads
Breaking News

ಮಾ.21 ರಂದು ನಡೆಯಲಿರುವ ಹಿಂದೂ ಐಕ್ಯತಾ ಸಮಾವೇಶ : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಮಾ.21 ರಂದು ನಡೆಯಲಿರುವ ಹಿಂದೂ ಐಕ್ಯತಾ ಸಮಾವೇಶದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಮಾವೇಶಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕೆಂದು ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಗೋಪಾಲ್ ನಾಯ್ಕ್ ಅವರು ಸಂಘಟಕರಿಗೆ ಸೂಚನೆ ನೀಡಿದ್ದಾರೆ.
ಹಿಂದೂ ಐಕ್ಯತಾ ಸಮಾವೇಶದ ಕುರಿತು ಮಾ.17ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಸಮಾವೇಶಕ್ಕೆ ಸಂಬಂಧಿಸಿ ಮೆರವಣಿಗೆ ಅಥವಾ ಶೋಭಾಯಾತ್ರೆ ಇದ್ದಲ್ಲಿ ಅಥವಾ ಮೆರವಣಿಗೆ ಮುಗಿದ ಬಳಿಕವು ಯಾವುದೇ ಜನಾಂಗ, ಧರ್ಮದ ವಿರುದ್ಧ ಘೋಷಣೆ ಕೂಗಬಾರದು, ಕಾರ್ಯಕ್ರಮದ ವ್ಯವಸ್ಥೆ ಕುರಿತು ಸ್ವಯಂ ಸೇವಕರನ್ನು ನೇಮಿಸುವುದು, ಮಧ್ಯಪಾನ ಮಾಡಿ ಬಂದವರನ್ನು ಗುರುತಿಸಿ ಸ್ವಯಂ ಸೇವಕರೇ ಠಾಣೆಗೆ ಒಪ್ಪಿಸಬೇಕು ಹೇಳಿದ್ರು.
ಈ ವೇಳೆ ಎಸ್‍ಡಿಪಿಐ ನಗರ ವಲಯದ ಅಶ್ರಫ್ ಬಾವು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮನಾಯ್ಕ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *