Header Ads
Header Ads
Breaking News

ಮಾ.3 ರಂದು ರಾಮಯ್ಯ ನಾಯ್ಕ್ ಮತ್ತು ದಿ. ಮಹಿಮ್ ಕುಮಾರ್ ಹೆಗ್ಡೆ ನೆನಪು ಕಾರ್ಯಕ್ರಮ.

ವಿಟ್ಲ: ಬೆಂಗಳೂರು ಗಂಗಾನಗರ ಮಹಾತ್ಮಾಗಾಂಧಿ ಶಾಂತಿ ಸೌಹಾರ್ದ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರವಿಶಂಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಅವಿಭಜಿತ ದ.ಕ.ಜಿಲ್ಲೆಯ ಚೇತನಗಳಾದ ದಿ.ಕುರ್ನಾಡು ರಾಮಯ್ಯ ನಾಯ್ಕ್ ಮತ್ತು ದಿ. ಮಹಿಮ್ ಕುಮಾರ್ ಹೆಗ್ಡೆ ಅವರ ನೆನಪು ಕಾರ್ಯಕ್ರಮವು ಮಂಗಳೂರು ಪುರಭವನದಲ್ಲಿ ಮಾ.3ರಂದು ನಡೆಯಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಅವರು ತಿಳಿಸಿದರು.

ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ರಹಿತವಾಗಿ ಈ ಕಾರ್ಯಕ್ರಮ ನಡೆಯಲಿದೆ. ಸಮಾಜ ಸೇವಾರತ್ನ ಎಂದು ಖ್ಯಾತರಾಗಿರುವ ದಿ.ರಾಮಯ್ಯ ನಾಯ್ಕ್ ಅವರು ವಿಜಯಾ ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಪಡೆದು ಕೃಷಿ ಮತ್ತು ಸಮಾಜಸೇವೆಯಲ್ಲಿ ತೊಡಗಿದ್ದರು. ವಿಟ್ಲ ಕ್ಷೇತ್ರದಿಂದ ವಿಧಾನಸಭೆಗೂ ಸ್ಪರ್ಧಿಸಿ, ಸೋಲುಂಡರೂ ಜನಪ್ರಿಯತೆ ಕಡಿಮೆಯಾಗಿರಲಿಲ್ಲ. ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅವರು 1998ರಲ್ಲಿ ಇಹಲೋಕ ತ್ಯಜಿಸಿದರು ಎಂದು ತಿಳಿಸಿದರು.
ಅದೇ ರೀತಿ ದಿ. ಮಹಿಮ್ ಕುಮಾರ್ ಹೆಗ್ಡೆ ಅವರು ಉಡುಪಿ ಜಿಲ್ಲೆಯ ಸಜ್ಜನ ರಾಜಕಾರಣಿ. ಸಮಾಜಸೇವಕರಾಗಿ ಹಿರೇಬೆಟ್ಟ ಆತ್ರಾಡಿ ಗ್ರಾ.ಪಂ.ಅಧ್ಯಕ್ಷರಾಗಿ, ಮಂಡಲ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಯುವಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ಹಲವು ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಕಾರಣರಾಗಿದ್ದರು ಎಂದು ವಿವರಿಸಿದರು.
ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡ ಚಾಲನೆ ನೀಡಲಿದ್ದಾರೆ. ದಿ. ರಾಮಯ್ಯ ನಾಯ್ಕ್ ಮತ್ತು ದಿ. ಮಹಿಮ್ ಕುಮಾರ್ ಹೆಗ್ಡೆ ಅವರ ವಿವಿಧ ಕ್ಷೇತ್ರಗಳ ಸಹವರ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಲಕ್ಷ್ಮೀನಾರಾಯಣ ಅಡ್ಯಂತಾಯ, ಹರೀಶ್ ಕೊಟ್ಟಾರಿ, ವಿ.ಎಸ್.ಇಬ್ರಾಹಿಂ ವಿಟ್ಲ, ಜಾಫರ್‌ಖಾನ್, ಮಧುಸೂಧನ್, ರಾಮಣ್ಣ ಶೆಟ್ಟಿ ಪಾಲಿಗೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *