Header Ads
Header Ads
Breaking News

ಮಾ.6ರಿಂದ 10ರ ತನಕ ಸಾಲ್ಮರ ಸಯ್ಯದ್‍ಮಲೆ ಮಖಾಂ ಉರೂಸ್ ಕಾರ್ಯಕ್ರಮ

ಪುತ್ತೂರಿನ ಸಾಲ್ಮರ ಸಯ್ಯದ್‍ಮಲೆ ಮಖಾಂ ಉರೂಸ್ ಹಾಗೂ ಐದು ದಿನಗಳ ಮತ ಪ್ರವಚನ ಕಾರ್ಯಕ್ರಮ ಮಾ.6 ರಿಂದ 10 ರ ತನಕ ಸಾಲ್ಮರ ಸಯ್ಯದ್ ಮಲೆ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ಜುಮಾ ಮಸೀದಿ ಕೋಶಾಧಿಕಾರಿ ಮುಫತ್ತಿಶ್ ಉಮರ್ ದಾರಿಮಿ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉರೂಸ್ ಕಾರ್ಯಕ್ರಮ ಬುಧವಾರ ರಾತ್ರಿ ಸಯ್ಯದ್‍ಮಲೆ ಜುಮಾ ಮಸೀದಿ ಖತೀಬ ಅಲ್‍ಹಾಜ್ ಪಿ.ಎಂ.ಉಮ್ಮದ್ ದಾರಿಮಿ ಅವರಿಂದ ಉದ್ಘಾಟನೆಗೊಂಡಿದೆ. ಮಾ.7 ಗುರುವಾರ ಬಹು| ಸಯ್ಯದ್ ಅಲ್‍ಹಾದಿ ಶರಫುದ್ದೀನ್ ತಂಙಳ್ ದುಆಶೀರ್ವಚನ ನೀಡಲಿದ್ದು, ಬಹು| ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಪ್ರಭಾಷಣ ಮಾಡುವರು. ಮಾ.8 ರಂದು ಸೆಯ್ಯದ್ ಅಲ್‍ಹಾದಿ ಯಾಹ್ಯಾ ತಂಙಳ್ ಸಾಲ್ಮರ ದುರ್ವಾಶೀರ್ವಚನ ಮಾಡಲಿದ್ದು, ಕಲ್ಲೇಗ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಮುಖ್ಯ ಪ್ರಭಾಷಣ ಮಾಡುವರು. ಮಾ.9 ರಂದು ಪುತ್ತೂರು ಮುದರ್ರಿಸ್ ಅಲ್‍ಹಾಜ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚ ನೀಡಲಿದ್ದು, ನೆಲ್ಲಿಯಾಹುದ್ಕೇರಿ ಇಕ್ಬಾಲ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡುವರು ಎಂದು ತಿಳಿಸಿದರು.

ಮಾ.10 ಭಾನುವಾರ ನಡೆಯುವ ಉರೂಸ್ ಸಮಾರಂಭದಲ್ಲಿ ಕೇರಳ ಕುನ್ನುಂಗೈ ಎನ್‍ಪಿಎಂ ಸೆಯ್ಯದ್ ಫಝಲ್ ಕೋಯಮ್ಮ ತಂಙಳ್ ದುವಾಶೀರ್ವಚನ ನೀಡುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್.ಹಸನ್ ಸಾಲ್ಮರ, ಉಪಾಧ್ಯಕ್ಷ ಮಮ್ಮುಟ್ಟಿ, ಎಸ್‍ಕೆಎಸ್‍ಎಸ್‍ಎಫ್ ಸಾಲ್ಮರ ಶಾಖಾ ಅಧ್ಯಕ್ಷ ಇಬ್ರಾಹಿಂ ಬಾತಿಷ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *