Header Ads
Breaking News

ಮಿಥುನ್ ರೈ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ವಾಗ್ದಾಳಿ

ನಾಥ ಪರಂಪರೆಯ ಬಗ್ಗೆ ಸಮಾಜಕ್ಕೆ ಅಪಾರ ಗೌರವವಿದೆ. ಅಂತಹ ಪರಂಪರೆಯ ನಾಯಕ ಯೋಗಿ ಆದಿತ್ಯನಾಥ್ ಅಂತವರ ಬಗ್ಗೆ ಮಿಥುನ್ ರೈ ಅವಹೇಳನ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಯೋಗಿ ಆದಿತ್ಯನಾಥ್ ಬಂದರೆ ಮಸಿ ಬಳಿಯುವ ಬಗ್ಗೆ ಮಾತನಾಡಿದ್ದಾರೆ. ಇದು ಮಿಥುನ್ ರೈ ಯೋಗ್ಯತೆಯನ್ನ ತೋರಿಸುತ್ತಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಹೇಳಿದರು.

ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಿಥುನ್ ರೈ ವಿರುದ್ಧ ವಾಗ್ದಾಳಿ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನ ಕಾಂಗ್ರೆಸ್ ಖರೀದಿಸಿಲ್ಲ. ಸಂವಿಧಾನ ಮೇಲೆ ನಂಬಿಕೆ ಇಟ್ಟು ಕಾಂಗ್ರಸ್ ಪ್ರತಿಭಟಿಸುತ್ತಿಲ್ಲ. ಬದಲಿಗೆ ಕಾನೂನು ಬಾಹಿರವಾಗಿ ಮಾತುಗಳನ್ನಾಡಿ ಪ್ರತಿಭಟಿಸುತ್ತಿದೆ. ಅತ್ಯಾಚಾರ ವಿರೋಧಿಸಿ ಕಠಿಣ ಕಾನೂನು ಜಾರಿಗೆ ತಂದಿದ್ದು ಮೋದಿ ಸರ್ಕಾರ ಎಂದ ಅವರು, ಕೇರಳದಲ್ಲಾದ ಅತ್ಯಾಚಾರದ ಬಗ್ಗೆ ಕಾಂಗ್ರೆಸ್ ಮೌನ ವಹಿಸಿದೆ. ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಉ.ಪ್ರ. ದ ಘಟನೆಯನ್ನ ಬಿಜೆಪಿಯೂ ಖಂಡಿಸುತ್ತದೆ. ಮಿಥುನ್ ರೈ ಹೇಳಿಕೆಯನ್ನೂ ಬಿಜೆಪಿ ಖಂಡಿಸುತ್ತದೆ. ಇಂತಹ ಹೇಳಿಕೆಯನ್ನ ಕಾಂಗ್ರೆಸ್ ಕೈ ಬಿಡಬೇಕು. ಇಲ್ಲದಿದ್ದಲ್ಲಿ ಬಿಜೆಪಿಯೂ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *