Header Ads
Breaking News

ಮಿಥುನ್ ರೈ ಹೀನಾಯ ಸೋಲು ಕಂಡರೂ ನಾಚಿಕೆ ಮಾನ ಮರ್ಯಾದೆ ಇಲ್ಲ : ಇಂಟಕ್ ಜಿಲ್ಲಾ ಅಧ್ಯಕ್ಷ ಪುನೀತ್ ಶೆಟ್ಟಿ ಕಿಡಿ

ಮಿಥುನ್ ರೈ ತಾನೊಬ್ಬ ಅಂಕದ ಕೋಳಿ, ಬಂಟ ವ್ಯಕ್ತಿ ಹೇಳ್ತಾನೆ, ಅದ್ರೆ ಈ ಬಾರಿ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೂ ಅತನಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ…ಇದೆಲ್ಲ ನಾವು ಹೇಳ್ತಾ ಇರುವ ಮಾತಲ್ಲ.. ಇದು ಮಿಥುನ್ ರೈ ವಿರುದ್ಧ ಇಂಟಕ್ ಜಿಲ್ಲಾ ಅಧ್ಯಕ್ಷ ಪುನೀತ್ ಶೆಟ್ಟಿ ಆಡಿರುವ ಮಾತು.ತನ್ನನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿರುವ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪುನೀತ್ ಶೆಟ್ಟಿ, ಕಾಂಗ್ರೆಸ್ ಸದಸ್ಯತ್ವವಿಲ್ಲದ ನನಗೆ ಅಮಾನತು ಆದೇಶ ಹೊರಡಿಸಿರುವುದು ಬಹಳ ಹಾಸ್ಯಾಸ್ಪದವಾಗಿದೆ. ನನಗೆ ಅಮಾನತು ಆದೇಶ ಹೊರಡಿಸುವ ಯಾವುದೇ ಅಧಿಕಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಇಲ್ಲ. ನಾನು ಇಂಟೆಕ್‌ನ ಒಬ್ಬ ನಿಷ್ಠಾವಂತ ಕಾರ್ಯಕರ್ತ. ಕಳೆದ ಎರಡು ವರ್ಷದಲ್ಲಿ ಕಾರ್ಮಿಕ ವರ್ಗಕ್ಕೆ ಅನೇಕ ಕೆಲಸ ಮಾಡಿದ್ದೇನೆ. ಸಿದ್ಧರಾಮಯ್ಯ , ಡಿಕೆ. ಶಿವಕುಮಾರ್ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು, ನನ್ನ ರಾಜಕೀಯ ಬೆಳವಣಿಗೆ ಸಹಿಸದ ಮಿಥುನ್ ರೈ ಮೊದಲಿನಿಂದಲೂ ದ್ವೇಷ ಕಾರುತ್ತಾ ಬಂದಿರುತ್ತಾರೆ ಎಂದು ಅವರು ಕಿಡಿಕಾರಿದರು.ಇನ್ನು ಬಂಟ್ವಾಳದಲ್ಲಿ ಬಜರಂಗದಳ ಕಾರ್ಯಕರ್ತರ ಬಂಧನದಲ್ಲಿ ಮಿಥುನ್ ರೈ ಕೈವಾಡವಿದೆ. ಗನ್‌ಮ್ಯಾನ್ ನೀಡುವುದಕ್ಕಾಗಿ ಒಳಒಪ್ಪಂದ ಮಾಡಿಕೊಂಡಿದ್ದಾನೆ. ಇದರ ಬಗ್ಗೆ ಪೊಲೀಸರು ವರಿಷ್ಠರು ಉನ್ನತಮಟ್ಟದಲ್ಲಿ ತನಿಖೆ ಮಾಡಿಕೊಳ್ಳಬೇಕು. ಆರೋಪಿಗಳನ್ನು ದಸ್ತಗರಿ ಮಾಡಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ರು.

Related posts

Leave a Reply

Your email address will not be published. Required fields are marked *