Header Ads
Header Ads
Breaking News

ಮಿಯಾರು ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ

ಐತಿಹಾಸಿಕ ೧೫ನೇ ವರ್ಷದ ಮಿಯಾರು ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ ದೊರಕಿತು. ಕಾರ್ಕಳದ ಶಾಸಕ ವಿ. ಸುನೀಲ್ ಕುಮಾರ್ ಅವರು ಕಂಬಳಕ್ಕೆ ಚಾಲನೆ ನೀಡಿದರು. ಕಂಬಳ ಯಶಸ್ವಿಯಾಗಲು ಆಗಮಿಸಿದ ಗಣ್ಯರು ಶುಭಕೋರಿದರು.

ಕಾರ್ಕಳ ತಾಲ್ಲೂಕಿನ ಮಿಯಾರು ಕಂಬಳ ಸಮಿತಿ, ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ತಾಲ್ಲೂಕಿನ ಐತಿಹಾಸಿಕ ೧೫ನೇ ವರ್ಷದ ಮಿಯಾರು ’ಲವ-ಕುಶ ಜೋಡುಕೆರೆ ಬಯಲು ಕಂಬಳ’ಕ್ಕೆ ಶಾಸಕ ವಿ.ಸುನಿಲ್ ಕುಮಾರ್ ಚಾಲನೆ ನೀಡಿದರು.

ಮಿಯಾರು ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರಿದಾಸ ಭಟ್ ಚಾಲನೆ ನೀಡಿ ಮಾತನಾಡಿ ಕರಾವಳಿಯ ಪ್ರಸಿದ್ಧ ಕ್ರೀಡೆಯೆನಿಸಿದ ’ಲವ-ಕುಶ ಜೋಡುಕೆರೆ ಕಂಬಳ’ ಮಿಯಾರಿನಂತಹ ಗ್ರಾಮೀಣ ಭಾಗದಲ್ಲಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ನೂರಾರು ರೈತರು ಇದರಲ್ಲಿ ಸಕ್ರಿಯವಾಗಿ ಭಾಗಯಾಗುತ್ತಿದ್ದಾರೆ. ಕಂಬಳ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಶುಭಹಾರೈಸಿದರು.
ಮಿಯಾರು ಮಿಯಾರು ಚರ್ಚಿನ ಧರ್ಮಗುರು ರೆ.ಫಾ. ಜೆರೋಮ್ ಮೊಂತೆರೋ ಮಾತನಾಡಿ ಕಾನೂನಾತ್ಮಕವಾಗಿ, ಶಾಂತಿಯುತವಾಗಿ ಕಂಬಳ ನಡೆಯಲಿ ಎಂದು ಶುಭಹಾರೈಸಿದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನದಾಸ ಅಡ್ಯಂತಾಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಮಾಧವ ಕಾಮತ್, ಗೌರವಾಧ್ಯಕ್ಷ ಮಾಜಿಶಾಸಕ ಎಚ್.ಗೋಪಾಲ ಭಂಡಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸುನಿಲ್ ಬಜಗೋಳಿ, ಸುಧಾಕರ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ರವೀಂದ್ರ ಕುಮಾರ್ ಕುಕ್ಕುಂದೂರು, ವಿಜಯ ಕುಮಾರ್ ಕಂಗಿನಮನೆ ನೂರಾಳ್‌ಬೆಟ್ಟು, ಎಪಿಎಂಸಿ ಮಾಜಿಅಧ್ಯಕ್ಷ ನಕ್ರೆ ಅಂತೋನಿ ಡಿಸೋಜಾ, ಜಿಲ್ಲಾ ಪಂಚಾಯಿತಿ ಸದಸ್ಯ ದಿವ್ಯಶ್ರೀ ಅಮೀನ್, ಉದಯ ಎಸ್.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply