Header Ads
Breaking News

’ಮಿಷನ್ ಶಕ್ತಿ’ ಮೂಲಕ ಲೈವ್ ಸ್ಯಾಟಲೈಟ್ ಹೊಡೆದುರುಳಿಸಿದ ಭಾರತ: ದೇಶವನ್ನುದ್ದೇಶಿಸಿ ಮೋದಿ ಭಾಷಣ

ಮಿಷನ್ ಶಕ್ತಿ ಎನ್ನುವ ಮಹತ್ತರ ಕಾರ್ಯಾಚರಣೆ ಮೂಲಕ ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಲೈವ್ ಸ್ಯಾಟಲೈಟ್‍ನ್ನು ಹೊಡೆದುರುಳಿಸಲಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವಿಚಾರವನ್ನು ತಮ್ಮ ಭಾಷಣದ ಮೂಲಕ ಬಹಿರಂಗಪಡಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ನರೇಂದ್ರ ಮೋದಿಯವರು, ಭಾರತ ದೇಶಕ್ಕೆ ಇದು ಅತ್ಯಂತ ಗರ್ವದ ದಿನವಾಗಿದೆ. ಅಂತರಿಕ್ಷದಲ್ಲಿ ಲೈವ್ ಸ್ಯಾಟಲೈಟ್‍ನ್ನು ಹೊಡೆದುರುಳಿಸಲಾಗಿದೆ. ಭಾರತದ ವಿಜ್ಞಾನಿಗಳು ಯಶಸ್ವಿಯಾಗಿ ಇದನ್ನು ಮಾಡಿದಾರೆ. ಇದು ಕೇವಲ 3 ನಿಮಿಷದ ಕಾರ್ಯಾಚರಣೆ ಆಗಿತ್ತು ಎನ್ನುವ ವಿಚಾರವನ್ನು ಹೇಳಿದ್ದಾರೆ. ಇದು ಕೇವಲ 3 ನಿಮಿಷದ ಕಾರ್ಯಾಚರಣೆ ಆಗಿತ್ತು. ಈ ಮೂಲಕ ನಾವು ಅಮೆರಿಕಾ, ರಷ್ಯಾ ಸಾಲಿಗೆ ಸೇರಿದ್ದೇವೆ. ಎಲ್‍ಇಒದಲ್ಲಿ ಲೈವ್ ಸ್ಯಾಟಲೈಟ್‍ನ್ನು ಹೊಡೆದುರುಳಿಸಿದ್ದೇವೆ. ಅಂತರಿಕ್ಷದಲ್ಲಿ ಈ ಕಾರ್ಯಾಚರಣೆ ಯಾವುದೇ ದೇಶದ ವಿರುದ್ಧವಲ್ಲ. ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದ್ದಲ್ಲ. ದೇಶದ ಸುರಕ್ಷತೆ, ಆರ್ಥಿಕತೆ ರಕ್ಷಿಸುವ ಉದ್ದೇಶದ ಪ್ರಯತ್ನ ಎನ್ನುವ ಮಾತುಗಳನ್ನಾಡಿದ್ದಾರೆ. 130 ಕೋಟಿ ಭಾರತೀಯರ ಭದ್ರತೆಯ ದೃಷ್ಟಿಯಿಂದ ಕ್ರಮ ಕೈಗೊಂಡಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಶಕ್ತಿಶಾಲಿ, ಅಭಿವೃದ್ಧಿಶೀಲ ಭಾರತ ನಿರ್ಮಿಸಬೇಕಿದೆ. ಭವಿಷ್ಯದ ಸವಾಲುಗಳನ್ನು ಎದುರಿಸೋ ಯೋಜನೆ ರೂಪಿಸಬೇಕು. ನಮ್ಮ ಉದ್ದೇಶ ಯುದ್ಧ ಮಾಡುವುದಲ್ಲ, ಶಾಂತಿ ಕಾಪಾಡುವುದು ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

Related posts

Leave a Reply

Your email address will not be published. Required fields are marked *