Header Ads
Header Ads
Header Ads
Breaking News

ಮೀಟಿಂಗ್ ಆಗಿ 2 ವರುಷವಾದರೂ ಈಡೇರಿಲ್ಲ ಭರವಸೆ ನೆನೆಗುದಿಗೆ ಬಿದ್ದಿದೆ ಕೌಕ್ರಾಡಿ ಪಂ. ಬೇಡಿಕೆಗಳು ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದ ಪಂ. ಸದಸ್ಯೆ ವಲ್ಸಮ್ಮ

ಎರಡು ವರುಷ ಆಯಿತು ಮೀಟಿಂಗ್ ಆಯಿತು, ಭರವಸೆಯ ಭರದ ಮಾತುಗಳು ಬಂತು.. ಆದರೆ ಈ ವರೆಗೂ ಅದ್ಯಾವುದೂ ನೆರವೇರುವುದು ಕಾಣುತ್ತಿಲ್ಲ. ಹೀಗೆಂದು ಆರೋಪ ಮಾಡಿದ್ದು ಬೇರಾರು ಅಲ್ಲ ಪುತ್ತೂರು ತಾಲೂಕು ಪಂಚಯಾತ್ ಕೌಕ್ರಾಡಿ ಕ್ಷೇತ್ರದ ಸದಸ್ಯೆ ಕೆ, ಟಿ ವಲ್ಸಮ್ಮ. ಹೌದು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಮಾತನ್ನು ಹೇಳಿದರು.

ಕೌಕ್ರಾಡಿ ಗ್ರಾಮ ಪಂಚಾಯತ್ ನ ಇಂಚ್ಲಾಪಾಡಿ ಗ್ರಾಮದಲ್ಲಿ ಆಟದ ಮೈದಾನ , ಗ್ರಾಮಕರಣಿಕರ ವಸತಿ ಗೃಹ, ಪಶು ವೈದ್ಯಕೀಯದ ಚಿಕಿತ್ಸಾಲಯದ ಕೋಠಡಿ, ಅಕ್ರಮ ಸಕ್ರಮ ಕಡತ ಸಿಟ್ಟಿಂಗ್ ಆಗಿ ಹಣ ಪಾವತಿಸಿ 13 ವರ್ಷ ಕಳೆದರೂ ಹಕ್ಕು ಪತ್ರ ನೀಡದೇ ಇರುವುದು ಈ ರೀತಿಯ ವಿಚಾರಗಳಿಂದ ನೋಂದು ಪುತ್ತೂರು ತಾಲೂಕು ಪಂಚಾಯತ್ ನ ಸಾಮಾನ್ಯ ಸಬೆಯಲ್ಲಿ ಯಾವುದೆ ವಿಚಾರವನ್ನು ಮಾತನಾಡದೇ ಕಪ್ಪು ಬಟ್ಟೆ ದರಿಸಿ ಪ್ರತಿಬಟನೆ ನಡೆಸಿದರು.

ಬಳಿಕ ತಾಲೂಕು ಪಂಚಾಯತ್ ಅದ್ಯಕ್ಷರು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಲಾಯಿತು.  ಅಲ್ಲದೇ ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೋಳ್ಳದೇ ಇದ್ದಲ್ಲಿ ತಾಲೂಕು ಕಛೇರಿಯ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವರದಿ: ಪ್ರವೀಣ್ ಪುತ್ತೂರು

Related posts

Leave a Reply