Header Ads
Header Ads
Breaking News

“ಮೀನಾ” ಮಕ್ಕಳ ಕನ್ನಡ ಸಿನೀಮಾ. ಕಿನ್ನಿಗೋಳಿಯ ವಿಜಯಾ ಕಲಾವಿದರು ಅಭಿನಯಿಸುವ ಚಿತ್ರ.

ಮೂಲ್ಕಿಯ ನಮನ ಕ್ರಿಯೇಶನ್ಸ್ ಅರ್ಪಿಸುತ್ತಾ ಹಾಗೂ ಕಿನ್ನಿಗೊಳಿಯ ವಿಜಯಾ ಕಲಾವಿದರು ಅಭಿನಯಿಸುವ “ಮೀನಾ” ಮಕ್ಕಳ ಕನ್ನಡ ಸಿನಿಮಾವನ್ನು ನಿರ್ಮಿಸಲಿದ್ದೇವೆ ಎಂದು ಚಿತ್ರತಂಡ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಈ ಬಗ್ಗೆ ಕಿನ್ನಿಗೋಳಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಚಿತ್ರತಂಡ ಈ ಚಿತ್ರ ಮನರಂಜನೆಗೆ ಸೀಮಿತವಾಗದೆ ಹಾಸ್ಯ, ಕೌಟುಂಬಿಕ, ಸಂದೇಶದೊಂದಿಗೆ ಪ್ರಸ್ತುತ ಜ್ವಲಂತ ಸಮಸ್ಯೆಯನ್ನು ಪ್ರತಿಬಿಂಬಿಸುವ ಸಿನಿಮಾಗಲಿದೆ ಶೈಕ್ಷಣಿಕವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರದರ್ಶಿಸುವ ಹಾಗೂ ಮಕ್ಕಳ ಜ್ಞಾನವಿಕಾಸಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮಾಡಲು ನಿರ್ಮಿಸಲಾಗುತ್ತಿದೆ. ಎಂದು ಕಥೆ ಚಿತ್ರಕಥೆ, ಸಂಭಾಷಣೆ ಬರೆದು ಸಹ ನಿರ್ದೇಶನದ ಜವಾಬ್ದಾರಿ ವಹಿಸಿರುವ ನರೇಂದ್ರ ಕೆರೆಕಾಡು ಹೇಳಿದರು ಅವರು ಕಿನ್ನಿಗೋಳಿಯ ಸ್ವಾಗತ್ ಸಭಾಗೃಹದಲ್ಲಿ ನಡೆದ ಮೀನಾ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಮಾಧ್ಯಮಗೋಷ್ಠಿಯಲ್ಲಿ , ಕೆ. ಭುವನಾಭಿರಾಮ, ಸಂಸ್ಥೆಯ ಸಂಚಾಲಕ ಸಾಯಿನಾಥ ಶೆಟ್ಟಿ ಮುಂಡ್ಕೂರು ಶರತ್ ಶೆಟ್ಟಿ ಕಿನ್ನಿಗೋಳಿ ಸುಧಾಕರ ಸಾಲ್ಯಾನ್ ಸಂಕಲಕರಿಯ, ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply