Header Ads
Breaking News

ಮೀನುಗಾರರ ನಾಪತ್ತೆ ಪ್ರಕರಣ: ನಾಪತ್ತೆ ಹಿಂದೆ ನೌಕಾ ಸೇನೆಯೇ ಕಾರಣ : ಪ್ರಮೋದ್ ಮಧ್ವರಾಜ್  ಆರೋಪ

ಉಡುಪಿ: ಏಳು ಮಂದಿ ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ. ನಾಪತ್ತೆ ಹಿಂದೆ ನೌಕಾಸೇನೆಯವರ ಕೈವಾಡ ಇದೆ ಅನ್ನೋ ಸಂಶಯ ಬರ್ತಾ ಇದೆ. ನೌಕಾಸೇನೆಯ ಶಿಪ್ ಮೀನುಗಾರರ ಬೋಟ್‌ಗೆ ಹಿಟ್ ಎಂಡ್ ರನ್ ಮಾಡಿರುವ ಸಂಶಯ ಇದೆ ಅಂತ ಉಡುಪಿ ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯ ಡಿಸಿಸಿ ಕಚೇರಿಯಲ್ಲಿ ಬಿಜೆಪಿ ಮತ್ತು ಸಂಸದೆ ಶೋಭಾ ವಿರುದ್ಧ ಹರಿಹಾಯ್ದ ಅವರು, ಮಲ್ಪೆಯ ಮೀನುಗಾರರು ನಾಪತ್ತೆಯಾಗಿ ನಾಲ್ಕು ತಿಂಗಳೆ ಕಳೆದಿವೆ. ಆದರೂ ನೌಕಾಸೇನೆ ಹುಡುಕುವ ನಾಟಕ ಮಾಡಿದೆ. ಚುನಾವಣೆವರೆಗೆ ಈ ಸತ್ಯ ಮರೆಮಾಚುವ ಪ್ರಯತ್ನ ಇದಾಗಿದೆ ಎಂದರು. ಈ ಪ್ರಶ್ನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಬೇಕು. ಶೋಭಾ ನಾಮಪತ್ರ ಸಲ್ಲಿಸುವಾಗ ನಿರ್ಮಲಾ ಸೀತಾರಾಮನ್ ಬರ್ತಾರಂತೆ. ಮೀನುಗಾರರು ಕಾಣೆಯಾದ ಪ್ರಕರಣ ಏನಾಯ್ತು ಎಂದು ರಕ್ಷಣಾ ಸಚಿವರೇ ಉತ್ತರಿಸಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಓರ್ವ ಬ್ಲಾಕ್ ಮೇಲರ್ ಎಂದರು ಪ್ರಮೋದ್ ಹೇಳಿದರು. ನಾವು ತಂದೆಯ ಕಾಲದಿಂದ ವ್ಯವಹಾರ ಮಾಡ್ತಾ ಇದ್ದೇವೆ. ಸಿಂಡಿಕೇಟ್ ಬ್ಯಾಂಕ್ ನಲ್ಲೇ ನಿರಂತರ ವ್ಯವಹಾರ ಮಾಡ್ತಿದ್ದೇವೆ. ಸರಿಯಾದ ಆಸ್ತಿ ಅಡಮಾನ ಇಲ್ದೇ ಯಾವ ಬ್ಯಾಂಕೂ ಸಾಲ ಕೊಡಲ್ಲ. ಸ್ಥಳೀಯ ಬಿಜೆಪಿಯವರು ಅವರನ್ನು ಛೂ ಬಿಟ್ಟಿದ್ದಾರೆ. ಅದಕ್ಕೆ ಅವರು ಚುನಾವಣೆ ವೇಳೆ ಬರ್ತಾರೆ ಎಂದು ಹರಿಹಾಯ್ದರು.

ಎರಡೂ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದಾರೆ. ಭಿನ್ನಾಭಿಪ್ರಾಯ ಮರೆತು ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗ್ತಾರೆ. ಶೋಭಾ ಸಂಸದೆಯಾಗಿ ಕ್ಷೇತ್ರದಲ್ಲಿ ಇದ್ದರೋ ಇಲ್ವೋ ಗೊತ್ತಾಗಲ್ಲ. ಬಿಜೆಪಿ ನಾಯಕರೇ ಗೋ ಬ್ಯಾಕ್ ಶೋಭಾ ಅಂತಾರೆ. ಈಗ ಮತದಾರರು ಗೋ ಬ್ಯಾಕ್ ಶೋಭಾ ಹೇಳಲು ತಯಾರಾಗಿದ್ದಾರೆ ಎಂದರು.

Related posts

Leave a Reply

Your email address will not be published. Required fields are marked *