Header Ads
Header Ads
Breaking News

ಮೀನುಗಾರರ ಪತ್ತೆಗೆ ಗರಿಷ್ಠ ಪ್ರಯತ್ನ: ಸಚಿವ ಎಂ.ಬಿ. ಪಾಟೀಲ್

ಮೀನುಗಾರರ ನಾಪತ್ತೆ ಪ್ರಕರಣದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೃಹ ಸಚಿವ ಎಂ.ಬಿ ಪಾಟೀಲ್ ಮಹತ್ವದ ಸಮಾಲೋಚನಾ ಸಭೆ ನಡೆಸಿದ್ರು. ಜಿಲ್ಲೆಯ ಜನಪ್ರತಿನಿಧಿಗಳು ,ಪೊಲೀಸ್ ಅಧಿಕಾರಿಗಳು ,ಕೋಸ್ಟ್ ಗಾರ್ಡ್ ಅಧಿಕಾರಿಗಳು ,ಮೀನುಗಾರ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ರು. ಮುಖ್ಯವಾಗಿ ಮಲ್ಪೆ ಬಂದರಿನಿಂದ ತೆರಳಿದ ಏಳು ಮೀನುಗಾರರು ನಾಪತ್ತೆಯಾಗಿರುವ ಬಗ್ಗೆ ಸಮಾಲೋಚನೆ ನಡೆಸಲು ಈ ಸಭೆ ನಿಗದಿಯಾಗಿತ್ತು. ಡಿಸೆಂಬರ್ ತಿಂಗಳ ಹದಿಮೂರನೇ ತಾರೀಕಿಗೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ ಇವತ್ತಿಗೆ ೨೨ ದಿನಗಳೇ ಕಳೆದಿವೆ.ಬೋಟ್ ನಲ್ಲಿದ್ದ ಏಳು ಮೀನುಗಾರರ ಕುಟುಂಬ ಕಂಗಾಲಾಗಿವೆ.ಈ ಸಂಬಂಧ ಕೋಸ್ಟ್ ಗಾರ್ಡ್ ಎಷ್ಡೇ ಶೋಧ ನಡೆಸಿದ್ರೂ ಪ್ರಯೋಜನವಾಗಿಲ್ಲ.ಹೀಗಾಗಿ ಇವತ್ತಿನ ಸಭೆಯ ಉದ್ದೇಶವೂ ಅದೇ ಆಗಿತ್ತು. ಈತನಕ ಕೋಸ್ಟ್ ಗಾರ್ಡ್ ಮತ್ತು ನೌಕಾಸೇನೆ ಯಾವ ರೀತಿ ಶೋಧಕಾರ್ಯಾಚರಣೆ ನಡೆಸಿದೆ ಎಂಬ ಬಗ್ಗೆಯೂ ಸಭೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

ಇನ್ನಷ್ಡು ಪರಿಣಾಮಕಾರಿಯಾಗಿ ಯಾವ ರೀತಿ ಕಾರ್ಯಾಚರಣೆ ನಡೆಸಬಹುದು ಎಂದು ಮೀನುಗಾರರು ಗೃಹ ಸಚಿವರ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿತು.ಕೊನೆಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ,ರಾಜ್ಯ ಮತ್ತು ಕೇಂದ್ರ ಸರಕಾರ ಮೀನುಗಾರರ ಶೋಧಕ್ಕೆ ಗರಿಷ್ಢ ಪ್ರಯತ್ನ ನಡೆಸುತ್ತಿದೆ.ಅವರೆಲ್ಲ ಸುರಕ್ಷಿತವಾಗಿ ವಾಪಾಸು ಬರಬೇಕು ಎಂಬುದೇ ನಮ್ಮೆಲ್ಲರ ಬಯಕೆಯಾಗಿದೆ.ಈ ಸಂಬಂಧ ಮಹಾರಾಷ್ಡ್ರ ಗೃಹ ಸಚಿವರ ಜೊತೆ ಶೀಘ್ರ ಸಭೆ ಕರೆಯುತ್ತೇವೆ.ನಮಗೆ ಮೀನುಗಾರರ ಜೀವ ಮುಖ್ಯ.ಇಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರ ಎಂಬ ಪ್ರಶ್ನೆ ಉದ್ಬವಿಸುವುದಿಲ್ಲ.ಎರಡೂ ಸರಕಾರ ಇನ್ನಷ್ಡು ಪ್ರಯತ್ನ ನಡೆಸಿ ಮೀನುಗಾರರ ಇರುವಿಕೆಯನ್ನು ಪತ್ತೆ ಹಚ್ಚಲಿದೆ ಎಂದರು

Related posts

Leave a Reply