Header Ads
Header Ads
Breaking News

ಮೀನುಗಾರಿಕಾ ಕಾಲೇಜಿನಲ್ಲಿ 3 ದಿನಗಳವರೆಗೆ ಗೋಲ್ಡನ್ ಜುಬುಲಿ ಫಿಶ್ಕೋ ಫೆಸ್ಟಿವಲ್

ಮೀನುಗಾರಿಕೆ ಕಾಲೇಜಿನಲ್ಲಿ ಶಿಕ್ಷಣ ಜೊತೆಗೆ ಹೊಸ ಸಂಶೋಧನೆಗೆ ಹೆಚ್ಚಿನ ಮಹತ್ವ ಕೊಡಬೇಕೆಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ಹೇಳಿದ್ರು. ಅವರು ನಗರದ ಎಕ್ಕೂರುನಲ್ಲಿರುವ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್ ಸಚಿವರು ಉದ್ಘಾಟಿಸಿ, ಮಾತನಾಡಿದರು. ಮೀನುಗಾರಿಕಾ ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡಕ್ಕೆ ಬೇಕಾದ 8 ಕೋಟಿ ರೂಪಾಯಿ ಮೊತ್ತವನ್ನು ಮುಂದಿನ ಬಜೆಟ್ ನಲ್ಲಿ ಘೋಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಅಂತಾ ಹೇಳಿದರು. ಕಾಲೇಜಿನ ಕಾಲೇಜಿನ ಡೀನ್ ಡಾ.ಎಚ್.ಶಿವಾನಂದ ಮೂರ್ತಿ ಅವರು ಸಚಿವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಿಬ್ಬಂದಿ ಸಲಹೆಗಾರರಾದ ಮನೋಜ್ ಕುಮಾರ್, ಡಾ.ಸುರೇಶ್ ಟಿ ಹಾಗೂ ವಿದ್ಯಾರ್ಥಿ ಸಂಯೋಜಕ ಧನುಷ್ ಸಿ.ಕೆ ಉಪಸ್ಥಿತರಿದ್ದರು

Related posts

Leave a Reply