Header Ads
Header Ads
Breaking News

ಮೀನುಗಾರಿಕೆ ಮಾಹಿತಿ ಕಾರ್ಯಾಗಾರ,  ಕುಂದಾಪುರದಲ್ಲಿ ಸವಲತ್ತು ವಿತರಣೆ

ಕರಾವಳಿ ಭಾಗದ ಸಿಆರ್‌ಝಡ್ ಸಮಸ್ಯೆಯನ್ನು ನೀಗಿಸುವಲ್ಲಿ ಸರಕಾರ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಈಗಾಗಲೇ ಇಲಾಖೆಯಿಂದ ಸಮೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಕರಾವಳಿಯಲ್ಲಿ ಮೀನುಗಾರರ ಮನೆ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗೆ ಸಹಕಾರವಾಗಲಿದೆ ಎಂದು ಬಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ತಿಳಿಸಿದರು.
ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿ. ಪಂ. ಹಾಗೂ ಮೀನುಗಾರಿಕಾ ಇಲಾಖೆಯ ಆಶ್ರಯದಲ್ಲಿ ನಡೆದ ಮೀನುಗಾರಿಕೆ ಮಾಹಿತಿ ಕಾರ್ಯಾಗಾರ ಮತ್ತು ಸವಲತ್ತು ವಿತರನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೀನುಗಾರರ ಅಭಿವೃದ್ಧಿಯ ಬಗ್ಗೆ ಸರಕಾರಕ್ಕೆ ಬೇರೆ ಬೇರೆ ಯೋಜನೆಗಳ ಬಗ್ಗೆ ಕೇಳಿಕೊಳ್ಳಲಾಗಿದೆ. ರಾಜ್ಯ ಸರಕಾರ ಆರ್‌ಟಿಜಿಎಸ್ ಮೂಲಕ ಜಮೆ ಮಾಡಲು ಉದ್ದೇಶಿಸಿದ್ದ ಸೀಮೆಎಣ್ಣೆ ಸಬ್ಸಿಡಿಯನ್ನು ನೇರ ಮೀನುಗಾರರ ಖಾತೆಗಳಿಗೆ ಹಾಕಲು ಕ್ರಮ ತೆಗೆದುಕೊಳ್ಳಲಿದೆ. ಈಗಾಗಲೇ ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನಾಡದೊಣಿ ಮೀನುಗಾರರ ಒಕ್ಕೂಟ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿರುತ್ತದೆ ಎಂದರು.

Related posts

Leave a Reply