Header Ads
Header Ads
Breaking News

ಮೀನುಗಾರಿಕೆ ವಿಚಾರದಲ್ಲಿ ಮೀನುಗಾರರ ಫೈಟ್

ಉಡುಪಿ: ಕರಾವಳಿ ಮೀನುಗಾರರ ಬದುಕು ಅಯೋಮಯವಾಗಿದೆ. ಈವರೆಗೆ ತುತ್ತಿನ ಸಂಪಾದನೆಗೆ ಸಮುದ್ರದ ಅಲೆಗಳ ಜೊತೆ ಹೋರಾಡುತ್ತಿದ್ದವರು, ಈಗ ತಮ್ಮೊಳಗೆ ಕಚ್ಚಾಡುತ್ತಿದ್ದಾರೆ. ಲೈಟ್ ಫಿಂಶಿಂಗ್ ವಿಚಾರದಲ್ಲಿ ಆಳಸಮುದ್ರ ಟ್ರಾಲ್ ಬೋಟ್ ಮಾಲಕರು ಹಾಗೂ ಪರ್ಸೀನ್ ಬೋಟ್ ಮಾಲಕರು ಕಾನೂನು ಸಮರ ನಡೆಸುತ್ತಿದ್ದಾರೆ. ಬುಧವಾರ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಎರಡೂ ಪಂಗಡಗಳು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಿ ಕಡಲಿನಲ್ಲಿ ರಾಡಿ ಎಬ್ಬಿಸಿದ್ದಾರೆ.

ಲೈಟ್ ಫಿಶಿಂಗ್ ಅಥವಾ ‘ಕಡಲಿಗೆ ಬೆಳಕು ಹಾಯಿಸಿ ನಡೆಸುವ ಮೀನುಗಾರಿಕೆ’ಯ ವಿಚಾರವಾಗಿ ಮಾನ್ಯ ಹೈಕೋರ್ಟ್ ಮಹತ್ವದ ಮದ್ಯಂತರ ಆದೇಶ ನೀಡಿದೆ. ಪರ್ಸೀನ್ ಬೋಟುಗಳು ಲೈಟ್ ಅಳವಡಿಸಿ ಮೀನು ಹಿಡಿಯೋದನ್ನು ಪಾರಂಪರಿಕ ಮೀನುಗಾರರು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಎಲ್ ಇ ಡಿ ಅಥವಾ ಹೆಲೋಜಿನ್ ಲೈಟ್ ಬಳಸಿ ಮೀನು ಹಿಡಿಯೋದರಿಂದ ಮೀನಿನ ಸಂತತಿಯೇ ನಶಿಸಿ ಹೋಗುತ್ತೆ ಅನ್ನೋದು ಅವರ ಆತಂಕವಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಬೆಳಕು ಹಾಯಿಸಿ ಮೀನುಗಾರಿಕೆ ನಡೆಸಕೂಡದು, LED ಲೈಟ್ ಬಳಸಲೇಬಾರದು ಎಂದು ಮದ್ಯಂತರ ಆದೇಶ ನೀಡಿದೆ. 2017೭ ರ ಕೇಂದ್ರ ಸರ್ಕಾರದ ಕಠೀಣ ಆದೇಶವನ್ನೇ ಪಾಲಿಸಬೇಕು ಎಂದು ಹೇಳಿದೆ. ಆದರೆ ಪರ್ಸೀನ್ ಮೀನುಗಾರರು ಈ ಆದೇಶವನ್ನು ತಮಗೆ ಅನುಕೂಲವಾಗುವಂತೆ ವಿಶ್ಲೇಷಿಸಿದ್ದಾರೆ. ನಾವು LED ಲೈಟ್ ಬಳಸುತ್ತಿಲ್ಲ ಸದ್ಯ ಬಳಸುತ್ತಿರುವ surface lighting , ಅಂದ್ರೆ ಬೋಟ್ ಗೆ ಅಳವಡಿಸುವ ಹೊರಮೈ ಬೆಳಕಿಗೆ ಯಾವುದೇ ಅಡ್ಡಿ ಇಲ್ಲ, ಹಾಗಾಗಿ ಸದ್ಯ ನಡೆಸುತ್ತಿರುವ ಲೈಟ್ ಫಿಶಿಂಗ್ ನಿರಾತಂಕ ಎಂದು ಹೇಳಿಕೊಂಡಿದ್ದಾರೆ.


ಲೈಟ್ ಫಿಶಿಂಗ್ ನಿಂದ ಪರ್ಸೀನ್ ಬೋಟು ಮಾಲಕರಿಗೂ ಆಳ ಸಮುದ್ರ ಮೀನುಗಾರಿಕೆ ನಡೆಸುವ ಟ್ರಾಲ್ ಬೋಟ್ ಮಾಲಕರಿಗೂ ಸಂಘರ್ಷ ಉಂಟಾಗಿದೆ. ಪರ್ಸೀನ್ ಬೋಟುಗಳು ಎರಡೇ ದಿನ ಮೀನುಗಾರಿಕೆ ನಡೆಸಿ ತಾಜಾ ಮೀನನ್ನು ಮಾರುಕಟ್ಟೆಗೆ ತರುತ್ತೆ. ಆಳಸಮುದ್ರ ಬೋಟುಗಳು 15 ದಿನಕ್ಕೊಮ್ಮೆ ಕಡಲತೀರಕ್ಕೆ ಬರುವಾಗ ಮೀನಿನ ತಾಜಾತನ ಹೋಗುತ್ತೆ, ಹಾಗಾಗಿ ಇವರ ಮೀನಿಗೆ ಬೇಡಿಕೆ ಕಡಿಮೆ. ಇದೇ ಕಾರಣಕ್ಕೆ ಸಂಘರ್ಷ ಆರಂಭವಾಗಿರುವುದು. ಪರ್ಸೀನ್ ಬೋಟುಗಳಲ್ಲಿ ಮೀನುಗಾರಿಕೆ ನಡೆಸುವ ಸುಮಾರು 700  ಬೋಟುಗಳಲ್ಲಿ ಸುಮಾರು25 ಸಾವಿರ ಮೀನುಗಾರರು ದುಡಿಯುತ್ತಾರೆ. 2016 ರಲ್ಲಿ ಕೇಂದ್ರ ಸರ್ಕಾರದ ಸೂಚನೆ ಬಂದ ನಂತರ ಸುಮರು 60 ಲಕ್ಷ ವ್ಯಯಿಸಿ ಬಲೆಯ ಅಳತೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಜೊತೆಗೆ ವಿದೇಶಿ ತಂತ್ರಜ್ಞಾನದ ಲೈಟ್ ಅಳವಡಿಸಲಾಗಿತ್ತು. ಒಂದು ವೇಳೆ ಎಲ್ಲಾ ಬಗೆಯ ಲೈಟ್ ಫಿಶಿಂಗ್ ನಿಷೇಧಗೊಂಡರೆ ಸಾವಿರಾರು ಮೀನುಗಾರರ ಬೀದಿಪಾಲಾಗುತ್ತಾರೆ. ವಿಜ್ಞಾನಿಗಳ ಮೂಲಕ ಸಂಶೋಧನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಶೀಪಾರಸು ಮಾಡುವ  ವಿಜ್ಞಾನಿಗಳ ಪ್ರಕಾರ ಪರ್ಸೀನ್ ಬೋಟುಗಳು ಬಳಸುವ, surface  ಲೈಟಿಂಗ್ ನಿಂದ ಯಾವುದೇ ಹಾನಿಯಿಲ್ಲ. ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸುವಾಗ ಈ ತಜ್ಞರಿಂದ ಮತ್ತು ಮೀನುಗಾರರಿಂದ ಯಾವುದೇ ವರದಿ ತರಿಸಿಕೊಂಡಿಲ್ಲ ಅಂತಲೂ ಆಕ್ಷೇಪಿಸಿದ್ದಾರೆ. ಆದರೆ ನಾಡ ದೋಣಿ ಮೀನುಗಾರರು ಲೈಟ್ ಫಿಶ್ಶಿಂಗನ್ನು ಆಕ್ಷೇಪಿಸುತ್ತಾ ಬಂದಿದ್ದಾರೆ.

ಫೆ.13 ಕ್ಕೆ ಈ ವಿಚಾರದಲ್ಲಿ ಅಂತಿಮ ಆದೇಶ ಹೊರಬರಲಿದ್ದು, ಪರ್ಸೀನ್ ಮೀನುಗಾರರು ಬಳಸುವ surface lighting ಗೆ ಯಾವುದೇ ಅಡ್ಡಿಯಾಗದು ಎಂಬ ನಿರೀಕ್ಷೆ ಹೊಂದಿದ್ದಾರೆ. ಕಡಲ ಮಕ್ಕಳ ಈ ಒಳ ಜಗಳದಿಂದ ಬಡ ಮೀನುಗಾರ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಕೋಟ್ಯಾಂತರ ರುಪಾಯಿ ವ್ಯಯಿಸಿ ಬೋಟ್ ಹಾಕಿದ ಮಾಲಕರಿಗೂ ನಷ್ಟವಾಗಿದೆ.

Related posts

Leave a Reply