Header Ads
Header Ads
Header Ads
Breaking News

ಮೀನು ಕಾರ್ಖಾನೆಯ ತ್ಯಾಜ್ಯ ನೀರು ಬಾವಿಗೆ ಸಂಕಷ್ಟದಲ್ಲಿ 400 ಕುಟುಂಬಗಳು

ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ ಕಣ್ವತೀರ್ಥ ಎಂಬ ಸ್ಥಳದಲ್ಲಿ ನೂತನವಾಗಿ ಆರಂಭಿಸಲಾದ ಯುನೈಟೆಡ್ ಸೀ ಪ್ರೊಡಕ್ಟ್ಸ್ ಎಂಬ ಮೀನು ಕಾರ್ಖಾಣೆಯಲ್ಲಿ ಮೀನಿನ ತ್ಯಾಜ್ಯಗಳ ನೀರು ಹಾಗೂ ಅದರ ತ್ಯಾಜ್ಯಗಳನ್ನು ಕೊಂಡೊಯ್ಯಲು ಪರ್ಯಾಯ ವ್ಯವಸ್ಥೆ ಮಾಡದೆ ಇರುವ ಹಿನ್ನೆಲೆಯಲ್ಲಿ ತ್ಯಾಜ್ಯ ನೀರುಗಳು ಈ ಪ್ರದೇಶಗಳಲ್ಲಿರುವ ಬಾವಿಗಳಿಗೆ ಪ್ರವೇಶಿಸಿ ಬಾವಿಯ ನೀರು ಕುಡಿಯಲು ಯೋಗ್ಯವಲ್ಲದ ರೀತಿಯಾಗಿದೆ. ಇದರಿಂದ ರೋಗ ಭೀತಿ ಎದುರಾಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ನೂತನವಾಗಿ ಆರಂಭಗೊಂಡ ಈ ಕಾರ್ಖಾಣೆಯಲ್ಲಿ ಮೀನುಗಳ ಬಿಡಿ ಭಾಗಗಳನ್ನು ಬೇರ್ಪಡಿಸಿ ಕರ್ನಾಟಕ, ಕೇರಳ, ತಮಿಳ್ನಾಡು ಸೇರಿದಂತೆ ಹಲವು ಸ್ಥಳಗಳಿಗೆ ರಫ್ತು ಮಾಡಲಾಗುತ್ತಿದೆ. ದಿನಂಪ್ರತಿ ಸುಮಾರು 50 ಲೋಡ್ ಮೀನುಗಳನ್ನು ಇಲ್ಲಿಂದ ಸಾಗಾಟ ಮಾಡುತ್ತಿರುವುದಾಗಿ ಪರಿಸರವಾಸಿಗಳು ಹೇಳುತಿದ್ದಾರೆ. ಆದರೆ ಇದರ ತ್ಯಾಜ್ಯ ನೀರು ಹೋಗಲು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಪರಿಸರದ ಕುಡಿಯುವ ನೀರಿನ ಬಾವಿಗಳು ತ್ಯಾಜ್ಯ ನೀರಾಗಿ ಮಾರ್ಪಾಟಾಗಿದೆ.

ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ಜಿಲ್ಲಾ ಪೊಲ್ಯೂಶನ್ ಬೋರ್ಡ್, ಮಂಜೇಶ್ವರ ಗ್ರಾ. ಪಂ. ಮೊದಲಾದೆಡೆ ದೂರುಗಳನ್ನು ನೀಡಿದ್ದಾರೆ. ಸ್ಥಳೀಯರು ಹಲವಾರು ಸಲ ಕಾರ್ಖಾಣೆಯ ಮುಂಬಾಗದಲ್ಲಿ ಪ್ರತಿಭಟನೆಗಳನ್ನು ಕೂಡಾ ಮಾಡಿದ್ದಾರೆ. ಆದರೆ ಯಾವುದೇ ಫಲ ಕಂಡಿಲ್ಲವೆಂಬುದು ಸ್ಥಳೀಯರ ಮನದಾಳದ ಮಾತು.

ಈ ಕಾರ್ಖಾಣೆಯ ಬದಿಯಲ್ಲಿರುವ ಚರಂಡಿಯಲ್ಲೂ ಕೊಳಚೆ ನೀರು ಹರಿದು ಹೋಗುವ ಸರಿಯಾದ ವ್ಯವಸ್ಥೆ ಇಲ್ಲದೇ ಇರುವ ಕಾರಣ ಈ ಪ್ರದೇಶದ ಬಹುತೇಕ ಕುಟುಂಬಗಳ ಮಕ್ಕಳು ಈ ದಾರಿಯಾಗಿಯೇ ಶಾಲೆಗೆ ಹೋಗುವಾಗ ಭೀತಿಯನ್ನು ಎದುರಿಸುವಂತಾಗಿದೆ. ಜೊತೆಯಾಗಿ ಈ ಪ್ರದೇಶದ ನಿವಾಸಿ ಪ್ರವೀಣ್ ಕುಮಾರ್ ಎಂಬವರಿಗೆ ಶರೀರದ ವಿವಿಧ ಭಾಗಗಳಲ್ಲಿ ತುರಿಕೆ ಆರಂಭಗೊಂಡಿದ್ದು, ಕೆಲವೊಂದು ಮಕ್ಕಳಿಗೂ ನೀರಿನ ದುಷ್ಪರಿಣಾಮ ಎದುರಾಗಿರುವುದಾಗಿ ಹೇಳುತಿದ್ದಾರೆ.

ಈ ಬಗ್ಗೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರನ್ನು ಮಾತನಾಡಿಸಿದಾಗ ಕಾನೂನಿನ ಚೌಕಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ಒಪ್ಪಿಗೆಯನ್ನು ಪಡೆದುಕೊಂಡೇ ಈ ಕಾರ್ಖಾನೆಗೆ ಚಾಲನೆ ನೀಡಲಾಗಿದೆ. ಆದರೆ ವಿದ್ಯುತ್ ಇಲಾಖೆಯಿಂದ ತ್ರಿ ಫ್ಯೂಸ್ ಸಂಪರ್ಕ ಸಿಗಲು ತಡವಾಗಿರುವ ಕಾರಣ ಮೀನಿನ ತ್ಯಾಜ್ಯ ನೀರನ್ನು ಸಂಸ್ಕ್ರರಿಸಲು ಸಾಧ್ಯವಾಗಿಲ್ಲವೆಂದು ಕಾರ್ಖಾಣೆಯವರ ಹೇಳಿಕೆ. ಪ್ರದೇಶಕ್ಕೆ ಬೇಟಿ ನೀಡಿದ್ದೇನೆ ಕಾರ್ಖಾಣೆಯವರ ಬೇ ಜವಾಬ್ದಾರಿ ಕಂಡು ಬಂದಿದೆ. 10 ದಿವಸದೊಳಗೆ ಸರಿ ಮಾಡಿ ಕೊಡಲಾಗುವುದಾಗಿ ಕಾರ್ಖಾಣೆಯವರು ತಿಳಿಸಿದ್ದಾರೆ. ಇಲ್ಲದೇ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

Related posts

Leave a Reply