Header Ads
Breaking News

ಮೀನು ಢಿಕ್ಕಿ ಹೊಡೆದು ಬೋಟ್‍ಗೆ ಹಾನಿ : ಆಳಸಮುದ್ರ ಮೀನುಗಾರಿಕೆ ವೇಳೆ ಘಟನೆ

ಮೀನು ಢಿಕ್ಕಿ ಹೊಡೆದು ಬೋಟ್ ಹಾನಿಗೀಡಾಗಿರುವ ಘಟನೆ ಆಳಸಮುದ್ರ ಮೀನುಗಾರಿಕೆ ವೇಳೆ ನಡೆದಿದೆ. ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿರುವ ತುಳುವಿನಲ್ಲಿ ಮಡಲ್ ಮೀನ್ ಎಂದು ಕರೆಯಲ್ಪಡುವ ಮೀನು ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಚೂಪಾಗಿ ಇರುವ ಬಾಯಿ ಮುರಿದು ಮೀನಿನಲ್ಲಿ ರಕ್ತಸ್ರಾವ ಉಂಟಾಗಿದೆ. ಆದರೆ ಮೀನು ಗುದ್ದಿದ ಪರಿಣಾಮಕ್ಕೆ ಮೀನುಗಾರಿಕಾ ದೋಣಿಯೇ ಹಾನಿಗೀಡಾಗಿದೆ. ಇಂದು ನಸುಕಿನ 3.32 ರ ಹೊತ್ತಿಗೆ ತೆಗೆಯಲಾದ ವೀಡಿಯೋ ಇದೀಗ ವೈರಲ್ ಆಗಿದೆ. ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ದೋಣಿ ಇದಾಗಿದೆ.

Related posts

Leave a Reply

Your email address will not be published. Required fields are marked *