Breaking News

ಮೀನು ಹಿಡಿಯಲೆಂದು ತೋಡಿಗೆ ಇಳಿದರು, ಮಂಜೇಶ್ವರದಲ್ಲಿ ಮೂವರು ಬಾಲಕರು ನೀರು ಪಾಲು

ಮಂಜೇಶ್ವರದ ಉದ್ಯಾವರ ಬಿ. ಎಸ್. ನಗರದಲ್ಲಿ ಮೀನು ಹಿಡಿಯಲೆಂದು ತೋಡಿಗೆ ಇಳಿದ ಮೂವರು ಬಾಲಕರು ನೀರು ಪಾಲಾಗಿದ್ದಾರೆ.
ಬಿ. ಎಸ್. ನಗರ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಮೊಹಮ್ಮದ್ ಶೆರೀಫ್, ಉದ್ಯಾವರ ಬನತ್ತಡಿ ನಿವಾಸಿ ಹಸನ್ ಕುಂಞಿ ಎಂಬವರ ಪುತ್ರ ಅಬ್ದುಲ್ ಅಫ್ರೀದ್, ಹಾಗೂ ಬಿ. ಎಸ್. ನಗರ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಅಸ್ಲಂ ಮೃತ ದುರ್ದೈವಿಗಳು. ಮದ್ಯಾಹ್ನದ ಸುಮಾರಿಗೆ ಮೂವರು ಮಕ್ಕಳು ಜತೆಯಾಗಿ ಕೈಯಲ್ಲಿ ಎರಡೆರಡು ಬಾಟ್ಲಿಗಳನ್ನು ಹಿಡಿದುಕೊಂಡು ಮೀನು ಹಿಡಿಯಲೆಂದು ತೋಡಿಗಿಳಿದಾಗ ಕೆಸರಿನಲ್ಲಿ ಹೂತು ಈ ದುರ್ಘಟನೆ ಸಂಭವಿಸಿದೆ. ಮಕ್ಕಳು ಬೆಳಿಗ್ಗೆ ಮನೆಯಿಂದ ಆಡಲೆಂದು ತೆರಳಿದ್ದು ಸಂಜೆ ತನಕವೂ ಬಾರದೆ ಇದ್ದಾಗ ಸಂಶಯಗೊಂಡು ಹುಡುಕಾಡಿದಾಗ ರಾತ್ರಿ ೭.೩೦ರ ಅಂದಾಜಿಗೆ ಮೃತ ದೇಹ ಇಲ್ಲಿನ ಕಣ್ವತೀರ್ಥ ಸಮೀಪವಿರುವ ತೋಡಿನಲ್ಲಿ ಪತ್ತೆಯಾಯಿತು. ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಶೋಧ ಕಾರ್ಯ ವಿಳಂಬವಾಗಿದೆ ಮಂಜೆಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply