Header Ads
Header Ads
Breaking News

ಮೀಯಪದವಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತನಿಗೆ ಹಲ್ಲೆ ವಿಚಾರ : ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ

ಮಂಜೇಶ್ವರ: ಮೀಯಪದವು ನಿವಾಸಿ ಎಸ್‌ಡಿಪಿಐ ಕಾರ್ಯಕರ್ತ ಫೈಜಲ್ ಎಂಬ ಯುವಕನನ್ನು ಹಲ್ಲೆಗೈದು ಕೊಲೆ ಮಾಡಲು ಯತ್ನಿಸಿದ ಪ್ರಕರಣವನ್ನು ವಿರೋಧಿಸಿ ಎಸ್ ಡಿಪಿಐ ಮಿಂಜ ಪಂಚಾಯತು ಕಮಿಟಿಯ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಕತ್ತಲೆಯ ಮರೆಯಲ್ಲಿ ಮುಖವಾಡ ಧರಿಸಿ ದುಷ್ಕೃತ್ಯವನ್ನು ನಡೆಸಿದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂಬುದಾಗಿ ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭ ಎಸ್‌ಡಿಪಿಐ ಮಿಂಜ ಪಂಚಾಯತು ಅಧ್ಯಕ್ಷ ಹೈದರ್ ಅಲಿ ಚಿಗುರುಪಾದ, ಉಪಾಧ್ಯಕ್ಷ ಅಜೀಜ್ ಕಡಂಬಾರ್, ಕಾರ್ಯದರ್ಶಿ ಸಿದ್ದೀಖ್ ಪಲ್ಲತಡ್ಕ, ಮೊದಲಾದವರು ಪ್ರತಿಭಟನಾ ಮೆರವಣಿಗೆಗೆ ನೇತೃತ್ವ ನೀಡಿದರು.

Related posts

Leave a Reply

Your email address will not be published. Required fields are marked *