Header Ads
Header Ads
Breaking News

ಮುಂಡ್ಕೂರು ಗ್ರಾಮ ಸಭೆ, ಮದ್ಯದಂಗಡಿಗೆ ನೀಡಿದ್ದ ಪರವಾನಿಗೆ ರದ್ದಿಗೆ ನಿರ್ಧಾರ


ಮುಂಡ್ಕೂರು ಸಪಳಿಗರ ಭವನದಲ್ಲಿ ನಡೆದ ೨೦೧೭-೧೮ರ ಸಾಲಿನ ಮುಂಡ್ಕೂರು ಗ್ರಾಮ ಪಂಚಾಯತ್‌ನ ಪ್ರಥಮ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಶುಭಾ ಪಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಬೆಳ್ಮಣ್ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರದಾಳು ಎಂಬಲ್ಲಿ ಮುಂಡ್ಕೂರು ಪೇಟೆಯಿಂದ ಸ್ಥಳಾಂತರಗೊಂಡ ಮದ್ಯದಂUಡಿಗೆ ಗ್ರಾಮ ಪಂಚಾಯತ್ ಪರವಾನಿಗೆ ನೀಡಿದ ಬಗ್ಗೆ ಅರದಾಳುವಿನ ಗ್ರಾಮಸ್ಥರು ಬಾರಿ ಅಕ್ರೋಶ ವ್ಯಕ್ತಪಡಿಸಿದರು. ಎಸ್‌ಟಿ ಕಾಲೋನಿಯ ಸಮೀಪದಲ್ಲಿ ಮದ್ಯದಂಗಡಿಯನ್ನು ತೆರೆಯದಂತೆ ಅರದಾಳು ಗ್ರಾಮಸ್ಥರು ಅಕ್ಷೇಪ ಪತ್ರ ನೀಡಿದರೂ ಕಟ್ಟಡ ಪರವಾನಿಗೆ ನೀಡದ ಪಂಚಾಯತ್ ವಿರುದ್ದ ವಾಗ್ಧಾಳಿ ನಡೆಸಿದರು. ಎಸ್‌ಟಿ ಕಾಲೋನಿಯ ಹಾಗು ಅಶ್ರಯ ಕಾಲೋನಿಯ ನೂರಾರು ಮಹಿಳೆಯರು ಅಕ್ರೋಶಿತರಾಗಿ ನಮಗೆ ರಸ್ತೆಯಲ್ಲಿ ನಡೆಯುವಂತಿಲ್ಲ ಹೆಣ್ಣು ಮಕ್ಕಳ ಮುಂದೆ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಮನೆ ಮುಂದೆ ಮದ್ಯದ ಬಾಟಲಿಗಳನ್ನು ಬಿಸಾಡುತ್ತಾರೆ ಎಂದು ತಮ್ಮ ಅಳಲನ್ನು ಸಭೆಯಲ್ಲಿ ತೋಡಿಕೊಂಡರು.
ಪಂಚಾಯತ್ ಮದ್ಯದಂಗಡಿಗೆ ಕೊಟ್ಟ ಕಟ್ಟಡ ಪರವಾನಿಗೆ ಹಾಗು ಡೋರ್ ನಂ.ರನ್ನು ರದ್ದುಗೊಳಿಸಿ ಅಂಗಡಿಯನ್ನು ತೆರವುಗೊಳಿಸಬೇಕು ಒಂದುವೇಳೆ ತೆರವುಗೊಳಿಸದಿದ್ದರೆ ಪಂಚಾಯತ್ ಮುಂದೆ ಧರಣಿ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಉತ್ತರಿಸಿ ಪಂಚಾಯತ್‌ನಿಂದ ನೀಡಿದ ಎಲ್ಲಾ ಪರವಾನಿಗೆಯನ್ನು ರದ್ದುಗೊಳಿಸಿ ಅಂಗಡಿಯನ್ನು ತೆರವುಗೊಳಿಸುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

Related posts

Leave a Reply