Header Ads
Header Ads
Header Ads
Breaking News

ಮುಂದಿನ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆ ಸಂಪನ್ನಗೊಂಡ ಭತ್ತ ಮುಹೂರ್ತ ಪೀಠಾರೋಹಣ ಮಾಡಲಿರುವ ಪಲಿಮಾರು ಶ್ರೀ ಸಂಪ್ರದಾಯದ ಪ್ರಕಾರ ಸಂಪನ್ನಗೊಂಡ ಕೊನೆಯ ಮುಹೂರ್ತ

2018 ಜನವರಿ 18ರ ಪರ್ಯಾಯ ಮಹೋತ್ಸವಕ್ಕೆ ಕೃಷ್ಣ ಮಠದಲ್ಲಿ ಸಿದ್ಧತೆ ಆರಂಭವಾಗಿದೆ. ಪರ್ಯಾಯ ಪೀಠಾರೋಹಣಗಯ್ಯಲಿರುವ ಮಠಾದೀಶರು ಪರ್ಯಾಯ ಮಹೋತ್ಸವಕ್ಕೂ ಮುನ್ನ ಸಂಪ್ರದಾಯದಂತೆ ಒಟ್ಟು ೪ ಮುಹೂರ್ತಗಳನ್ನು ನೆರವೇರಿಸಿದ್ದಾರೆ. ಇತ್ತೀಚಿಗಷ್ಟೇ ಬಾಳೆ , ಅಕ್ಕಿ ಮುಹೂರ್ತ ಹಾಗೂ ಕಟ್ಟಿಗೆ ಮುಹೂರ್ತ ನಡೆದಿದ್ದು ಇಂದು ಕೊನೆಯ ಮುಹೂರ್ತ ಭತ್ತ ಮುಹೂರ್ತ ಸಂಪನ್ನಗೊಂಡಿದೆ.

ಉಡುಪಿಯ ನಾಡ ಹಬ್ಬ ಪರ್ಯಾಯ ಮಹೋತ್ಸವ. ಪ್ರತೀ ಎರಡು ವರ್ಷಕ್ಕೊಮ್ಮೆ ಬರುವ ಪರ್ಯಾಯ ಮಹೋತ್ಸವಕ್ಕೆ ಉಡುಪಿಯ ಶ್ರೀ ಕೃಷ್ಣನ ನಾಡು ಸಿದ್ದಗೊಳ್ಳುತ್ತಾ ಇರುತ್ತದೆ. ಶ್ರೀ ಕೃಷ್ಣನ ಪೂಜಾ ಕೈಂಕರ್ಯವನ್ನು ಕೈಗೊಳ್ಳುವ ಅಧಿಕಾರವನ್ನು ಅಷ್ಟಮಠಾದೀಶರ ಪೈಕಿ ಪ್ರತೀ ಎರಡು ವರ್ಷಗಳಿಗೊಮ್ಮೆ ಬದಲಾಗುತ್ತಾ ಇರುತ್ತದೆ. ಪೇಜಾವರ ಶ್ರೀಗಳ ಐತಿಹಾಸಿಕ ಪರ್ಯಾಯದ ಬಳಿಕ ಇದೀಗ ಪಲಿಮಾರು ಶ್ರೀಗಳು ಮುಂದಿನ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಅದಕ್ಕಾಗಿ ಪ್ರತೀ ಪರ್ಯಾಯ ಕೈಗೊಳ್ಳುವ ಶ್ರೀಗಳು ೪ ಮುಹೂರ್ತಗಳನ್ನು ನಡೆಸಬೇಕು. ಬಾಳೆ, ಅಕ್ಕಿ, ಕಟ್ಟಿಗೆ, ಭತ್ತ ಮುಹೂರ್ತ ಹೀಗೆ ನಾಲ್ಕು ವಿಧದ ಮುಹೂರ್ತಗಳನ್ನು ನಡೆಸಬೇಕಾಗಿರುವ ಶ್ರೀಗಳು ತಮ್ಮ ಪರ್ಯಾಯಕ್ಕೆ ಒಂದು ವರ್ಷ ಇರುವಾಗಲೇ ಈ ಮುಹೂರ್ತಗಳನ್ನು ನಡೆಸುತ್ತಾರೆ. ಈಗಾಗಲೇ ಮೂರು ಮುಹೂರ್ತಗಳನ್ನು ನಡೆಸಿದ್ದು ಇಂದು ಧಾರ್ಮಿಕ ವಿಧಿ ವಿಧಾನದಲ್ಲಿ ನಾಲ್ಕನೇ ಮುಹೂರ್ತ ಭತ್ತ ಮುಹೂರ್ತ ಸಂಪನ್ನಗೊಮ್ಡಿತು. ವೇದವ್ಯಾಸ ಭಟ್ ಅವರ ಪೌರೋಹಿತ್ಯದಲ್ಲಿ ಈ ಮುಹೂರ್ತ ಸಂಪನ್ನಗೊಂಡಿತು.

ಮುಂದಿನ 2018 ರ ಜನವರಿ 18 ರಂದು ಪರ್ಯಾಯ ಪೀಠಾರೋಹಣ ಮಾಡುತ್ತಿರುವ ಈಗಿನ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀ ಗಳದ್ದು ಎರಡನೇ ಪರ್ಯಾಯದ ಅವಧಿಯಾಗಿದೆ. ಅನ್ನ ಬ್ರಹ್ಮನ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಪೊಡವಿಗೊಡೆಯ ಕೃಷ್ಣನ ಕ್ಷೇತ್ರ ಅನ್ನದಾನಕ್ಕೆ ಮಹತ್ವ ನೀಡುತ್ತದೆ. ಈ ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ಎರಡು ವರ್ಷಗಳ ಅವಧಿಯಲ್ಲಿ ಬೇಕಾಗುವಷ್ಟು ಎಲ್ಲಾ ಸೌಲಭ್ಯ ಹೊಂದಲು ಹಾಗೂ ಯಾವುದೇ ಕೊರತೆ ಬಾರದ ಹಾಗೆ ಈ ಸಂಪ್ರದಾಯವನ್ನು ಮದ್ವಾಚಾರ್ಯರ ಕಾಲದಿಂದ ಈಗಿನವರೆಗೂ ಪಾಲಿಸಿಕೊಂಡು ಬರಲಾಗುತ್ತಿದೆ.

ಒಟ್ಟಿನಲ್ಲಿ ಪರ್ಯಾಯದ ಸಂಪ್ರದಾಯದಂತೆ ನಾಲ್ಕು ಮುಹೂರ್ತಗಳು ಸಂಪನ್ನಗೊಂಡಿದೆ. ಇಂದು ಚಪ್ಪರ ಮುಹೂರ್ತ ಕೂಡಾ ನಡೆದಿದ್ದು ದೇಶ ಪರ್ಯಟನೆ ಹೊರಟಿರುವ ಪಲಿಮಾರು ಶ್ರೀಗಳು ಜನವರಿ 3 ರಂದು ಉಡುಪಿಗೆ ಬರಲಿದ್ದಾರೆ. ಮೂರರಂದು ಪುರಪ್ರವೇಶ ನಡೆಯಲಿದ್ದು ಅಲ್ಲಿಂದ ಪರ್ಯಾಯದ ಸಂಬ್ರಮ ಆರಂಭಗೊಳ್ಳಲಿದೆ.

ರಿಪೋರ್ಟರ್: ಪಲ್ಲವಿ ಸಂತೋಷ್ ಸರಳೇಬೆಟ್ಟು

Related posts

Leave a Reply