Header Ads
Header Ads
Breaking News

ಮುಂಬಯಿನ ಪ್ರತಿಷ್ಠಿತ ರಂಗನಟ ಮೋಹನ್ ಮಾರ್ನಾಡ್ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಆಯ್ಕೆ

ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಹಿರಿಯ ಕಲಾವಿದ ಪ್ರಶಸ್ತಿ ಪುರಸ್ಕೃತ ರಂಗನಟ, ನಿರ್ದೇಶಕ, ಕತೆಗಾರ ಮೋಹನ್ ಮಾರ್ನಾಡ್ ಅವರು 2018ನೇ ಸಾಲಿನ ರಂಗ ಪ್ರಶಸ್ತಿಯಾದ ‘ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ’ ಗೆ ಪಾತ್ರರಾಗಿದ್ದಾರೆ.

‘ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ’ ಬೆಂಗಳೂರುನಲ್ಲಿ ಪ್ರಕಟವಾಗಿದ್ದು, ‘ಜೀವಮಾನದ ಗೌರವ ಪ್ರಶಸ್ತಿ’ಕ್ಕೆ ಹಿರಿಯ ರಂಗಕರ್ಮಿ ಪಿ.ಗಂಗಾಧರ ಸ್ವಾಮಿ ಮೈಸೂರು ಇವರು ಭಾಜನರಾಗಿದ್ದಾರೆ. ರಂಗಭೂಮಿಯಲ್ಲಿ ಸಾಧನೆ ಮಾಡಿದ 25 ಮಹಾನೀಯರುಗಳು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ನಟ ಉಡುಪಿಯ ಟಿ.ಪ್ರಭಾಕರ ಕಲ್ಯಾಣಿ, ದಕ್ಷಿಣ ಕನ್ನಡದ ಉಷಾ ಭಂಡಾರಿ ಪ್ರಶಸ್ತಿಗೆ ಆಯ್ಕೆ ಆದವರಲ್ಲಿ ಪ್ರಮುಖರಾಗಿದ್ದಾರೆ. ಇವರಿಗೆ ತಲಾ ರೂಪಾಯಿ 25,000/- ನಗದು ಸಾವಿರ, ಪ್ರಶಸ್ತಿಪತ್ರ, ಪದಕ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಇವರು ರಂಗಭೂಮಿಯಲ್ಲಿ ಮಿಂಚಿದ ಹಿರಿಯ ಕಲಾವಿದರು. ಸಹೃದಯಿ, ಹಸನ್ಮುಖಿಯಾಗಿದ್ದು ಕಲಾರಾಧನೆಯಲ್ಲಿ ಅಪಾರ ವಿಶ್ವಸ್ಥರು. ಓರ್ವ ಅಪ್ರತಿಮ, ಪರಿಣತ ಕಲಾವಿದ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂಋ ತಾಲೂಕು ಮೂಡಬಿದರೆ ಸಮೀಪದ ಮೂಡು ಮಾರ್ನಾಡು ಇಲ್ಲಿ ಮೋಹನ್ ಮಾರ್ನಾಡ್ ಅವರ ಹುಟ್ಟೂರು

Related posts

Leave a Reply