Header Ads
Header Ads
Breaking News

ಮುಂಬಯಿಯಲ್ಲಿ ಮಂಗಳಮುಖಿಯರ ಹಲ್ಲೆ:ಪರಿವರ್ತನಾ ಚಾರಿಟೇಬಲ್ ಟ್ರಸ್ಟ್‌ನಿಂದ ಪ್ರತಿಭಟನೆ

 ಮುಂಬೈಯಲ್ಲಿ ಮಂಗಳಮುಖಿಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.ಇತ್ತಿಚಿನ ದಿನಗಳಲ್ಲಿ ಮಂಗಳಮುಖಿಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಮತ್ತು ಮುಂಬೈಯಲ್ಲಿ ಮಂಗಳಮುಖಿಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ನಡೆಸಿರುವವರನ್ನು ತಕ್ಷಣವೇ ಬಂದಿಸಬೇಕು ಎಂದು ಒತ್ತಾಯಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳಮುಖಿಯರು ಪ್ರತಿಭಟನೆ ನಡೆಸಿದರು.

ಈವೇಳೆ ನಾವು ಈಬಗ್ಗೆ ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ಕಾನೂನಷನ್ನು ಕೈಗೆತ್ತಿಕೊಂಡು ನಮ್ಮ ಮೇಲೆ ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಲ್ಲರಂತೆ ನಾವು ಕೂಡ ಮನುಷ್ಯರು ನಾವು ವಲಸೆ ಬಂದವರಲ್ಲ ನಾವು ಭಾರತೀಯರು ನಮಗೂ ಬದುಕುವ ಹಕ್ಕಿದೆ ಎಂದು ಒಕ್ಕೊರಳಿನಿಂದ ಕೂಗಿದರು.ಈ ಸಂದರ್ಭ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಟ್ರಸ್ಟಿಗಳಾದ ಸಂಜನಾ, ಶ್ರೀನಿಧಿ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ನಿಖಿಲ್, ಕಾಜಲ್ ಮತ್ತಿತರ ಮಂಗಳಮುಖಿಯರು ಉಪಸ್ಥಿತರಿದ್ದರು.

Related posts

Leave a Reply