Header Ads
Header Ads
Breaking News

ಮುಂಬಯಿಯ ಗೋರೆಗಾಂವ್‌ನಲ್ಲಿ ರೈಲಿನಲ್ಲಿ ಮತ್ತು ಭರಿಸುವ ಔಷಧ ನೀಡಿ ದರೋಡೆ

ರೈಲಿನಲ್ಲಿ ಮತ್ತು ಭರಿಸುವ ಔಷಧ ನೀಡಿ ದರೋಡೆ ಮಾಡಿದ ಕಳ್ಳನೋರ್ವನನ್ನು ಹದಿನೈದು ದಿನಗಳ ಬಳಿಕ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮುಂಬಯಿಯ ಗೋರೆಗಾಂವ್‌ನಲ್ಲಿ ನಡೆದಿದೆ.

ಇಂಥ ದಿಟ್ಟತನ ತೋರಿದ್ದು ಮೂಲತಃ ಬಂಟ್ವಾಳದ ಪಾಣೆಮಂಗಳೂರಿನ ರಾಜೇಶ್ ಕುಲಾಲ್. ಮುಂಬೈಯಲ್ಲಿ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುವ ರಾಜೇಶ್ ಗೋರೆಗಾಂವ್‌ನಲ್ಲಿ ದರೋಡೆಕೋರರಲ್ಲಿ ಓರ್ವನನ್ನು ಹಿಡುದು ಯಶಸ್ವಿಯಾಗಿದ್ದಾರೆ. ರಾಜೇಶ್ ಅವರು ರೈಲಿನಲ್ಲಿ ಮಂಗಳೂರಿಗೆ ಹೊರಟ್ಟಿದ್ದರು. ಆದೇ ವೇಳೆ ರೈಲಿನಲ್ಲಿ ಪ್ರಾಯಾಣಿಸುತ್ತಿರುವಾಗ ಚಪಾತಿ ಮತ್ತು ಬಿಸ್ಕೆಟ್ ತಿನ್ನುವಂತೆ ಒತ್ತಾಯ ಮಾಡಿದ್ದು, ಅದನ್ನು ರಾಜೇರ್ಶ ಕುಲಾಲ್ ಸ್ವೀಕರಿಸಿ ತಿಂದಿದ್ದಾರೆ. ಮತ್ತೆ ಏನೋಯಿತೋ ಎಂದು ತಿಳಿಯದೇ ನಿದ್ದೆಗೆ ಜಾರಿದ್ದರು.

ಮತ್ತೆ ಗೋರೆಗಾಂವ್‌ಗೆ ಹಿಂದಿರುಗಿದ್ದಾಗ ರೈಲಿನಲ್ಲಿ ಮೂವರನ್ನು ನೋಡಿದ್ದಾರೆ. ಕೂಡಲೇ ಅವರಲ್ಲೊಬ್ಬನ ಶರಟಿನ ಕಾಲರನ್ನು ರಾಜೇಶ್ ಹಿಡಿದಿದ್ದು, ಘಟನೆ ಬಗ್ಗೆ ಪ್ರಶ್ನಿಸಿದ್ದರು. ಇದೇ ವೇಳೆ ಇಬ್ಬರು ರೈಲಿನಿಂದ ಜಿಗಿದು ಪರಾರಿಯಾಗಿದ್ದು, ಸಹ ಪ್ರಯಾಣಿಕರ ಸಹಾಯದಿಂದ ಓರ್ವನನ್ನು ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

Leave a Reply