Header Ads
Header Ads
Breaking News

ಮುಂಬಯಿ ಶೇರು ಪೇಟೆ, ಎತ್ತರೆತ್ತರದಲ್ಲೂ ಅಂಕ ನಷ್ಟ

ನಿರಂತರ ವಹಿವಾಟಿನಲ್ಲಿ ಹೊಸ ಎತ್ತರಗಳ ದಾಖಲೆಯನ್ನು ಸೃಷ್ಟಿಸುತ್ತಲೇ ಸಾಗಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬೆಳಗ್ಗಿನ ವಹಿವಾಟಿನಲ್ಲಿ ೩೨,೧೦೦ ಅಂಕಗಳನ್ನು ದಾಟುವ ಸಾಧನೆಯನ್ನು ಮಾಡಿದ ಹೊರತಾಗಿಯೂ ದಿನದ ವಹಿವಾಟನ್ನು ೧೬.೬೩ ಅಂಕಗಳ ನಷ್ಟದೊಂದಿಗೆ ೩೨,೦೨೦.೭೫ ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ೫.೩೫ ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು ೯,೮೮೬.೩೫ ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ವಾರದ ನೆಲೆಯಲ್ಲಿನ ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಸೆನ್ಸೆಕ್ಸ್ ಈ ವಾರ ೬೬೦.೧೨ ಅಂಕಗಳ ಏರಿಕೆಯನ್ನು ಸಾಧಿಸಿದೆ; ನಿಫ್ಟಿ ೨೨೦.೫೫ ಅಂಕಗಳ ಗಳಿಕೆಯನ್ನು ದಾಖಲಿಸಿದೆ. ಸಾರ್ವಜನಿಕ ಶೇರು ನೀಡಿಕೆಯ ಬಳಿಕ ಈಚೆಗೆ ಲಿಸ್ಟಿಂಗ್ ಆಗಿದ್ದ ಎಯು ಸ್ಮಾಲ್ ಫಿನಾನ್ಸ್, ಸಿಡಿ‌ಎಸ್‌ಎಲ್, ಹುಡ್ಕೊ, ಎರಿಸ್ ಲೈಫ್ ಶೇರುಗಳು ಇಂದಿನ ವಹಿವಾಟಿನಲ್ಲಿ ಶೇ. ೫ರಿಂದ ಶೇ. ೧೧ರಷ್ಟು ಕುಸಿದದ್ದು ಗಮನಾರ್ಹವೆನಿಸಿತು.

Related posts

Leave a Reply