Breaking News

ಮುಕ್ವೆ ಬಳಿ ಕಾನ್‌ಸ್ಟೇಬಲ್ ಮೇಲೆ ಹಲ್ಲೆ, ಆರೋಪಿ ಬಂಧಿಸಿ ಕೋರ್ಟಿಗೆ ಹಾಜರು

ಹಣಕಾಸಿನ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಜೀವಬೆದರಿಕೆಯೊಡ್ಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಠಾಣೆಗೆ ಹಾಜರಾಗುವಂತೆ ನೋಟೀಸು ಜಾರಿಗೊಳಿಸಲು ಸಮವಸ್ತ್ರದಲ್ಲಿ ತೆರಳಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ನರಿಮೊಗ್ರು ಗ್ರಾಮದ ಮುಕ್ವೆ ಬಳಿ ನಡೆದಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುತ್ತೂರು ನಗರ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಹರೀಶ್ ಪಿ. ಹಲ್ಲೆಗೊಳಗಾದವರಾಗಿದ್ದಾರೆ. ಹರೀಶ್ ಅವರ ಮೇಲೆ ನರಿಮೊಗ್ರು ಗ್ರಾಮದ ಮಕ್ವೆ ಓಂಕಾರ ಬಡಾವಣೆಯ ನಿವಾಸಿ ಮಹಾಬಲ ನಾಯಕ್ ಅವರ ಪುತ್ರ ನಮನ್ ನಾಯಕ್ ಕೈಯಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಘಟನೆಯು ಹಣಕಾಸಿನ ವಿಚಾರಕ್ಕಾಗಿ ನಡೆದಿದೆ ಎನ್ನಲಾಗಿದೆ.

Related posts

Leave a Reply