Header Ads
Header Ads
Breaking News

ಮುಖ್ಯ ಚುನಾವಣಾ ಆಯುಕ್ತರು, ಜೈದಿ ನಿವೃತ್ತಿ, ಜೂನ್ 6, ಅಚಲ್ ಅಧಿಕಾರ ವಚನ

ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಜುಲೈ 6 ನಿವೃತ್ತರಾಗುತ್ತಿದ್ದು, ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಅಚಲ್ ಕುಮಾರ್ ಜ್ಯೋತಿ ಅದೇ ದಿನ ಅಧಿಕಾರ ವಹಿಸಲಿದ್ದಾರೆ ಎಂದು ಕಾನೂನು ಸಚಿವಾಲಯವು
ಅಧಿಸೂಚನೆಯಲ್ಲಿ ತಿಳಿಸಿದೆ.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಅಚಲ್ ಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದರು.
೧೯೭೫ನೇ ಬ್ಯಾಚಿನ ಗುಜರಾತ್ ಕೇಡರ್ ಐ‌ಎ‌ಎಸ್ ಅಧಿಕಾರಿಯಾಗಿರುವ ಅಚಲ್, ಗುಜರಾತ್ ಮುಖ್ಯ ಕಾರ್ಯದರ್ಶಿಯಾಗಿ ೨೦೧೩ರಲ್ಲಿ ನಿವೃತ್ತಿಯಾಗಿದ್ದರು. ಇದಕ್ಕೂ ಮುನ್ನ ವಿಚಕ್ಷಣಾ ಆಯುಕ್ತ, ಕಾಂಡ್ಲಾ ಬಂದರು ನಿಗಮದ ಅಧ್ಯಕ್ಷ, ಸರ್ದಾರ್ ಸರೋವರ್ ನರ್ಮದಾ ನಿಗಮದ ಮುಖ್ಯಸ್ಥ, ಕೈಗಾರಿಕೆ, ಕಂದಾಯ ಹಾಗೂ ನೀರಾವರಿ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
೨೦೧೫ರ ಮೇ ೮ರಂದು ಚುನಾವಣಾ ಆಯೋಗದ ಆಯುಕ್ತರಾಗಿ ಅವರು ಅಧಿಕಾರ ಸ್ವೀಕರಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ಅಧಿಕಾರಾವಧಿ ಐದು ವರ್ಷ ಅಥವಾ ಅವರಿಗೆ ೬೫ ವರ್ಷದ ತನಕ ಹುದ್ದೆಯಲ್ಲಿರಬಹುದು. ೨೧ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿರುವ ಅಚಲ್ ಕುಮಾರ್ ೨೦೧೮ರ ಜನವರಿ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.

Related posts

Leave a Reply